
ಪ್ರಗತಿವಾಹಿನಿ ಸುದ್ದಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಎನ್‌ಸಿಬಿ ಹಾಗೂ ದೆಹಲಿ ಪೊಲೀಸರು ನಡೆಸಿದ ಅತಿ ದೊಡ್ಡ ಜಂಟಿ ಕಾರ್ಯಾಚರಣೆಯಲ್ಲಿ ಬರೋಬ್ಬರಿ 328 ಕೆ.ಜಿ ಮೆಥಾಂಫೆಟಮೈನ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ದಾಳಿ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಮಾದಕ ವಸ್ತುವಿನ ಮೌಲ್ಯ ಅಂದಾಜು ₹262 ಕೋಟಿ ಎನ್ನಲಾಗಿದೆ.
ನಮ್ಮ ಸರ್ಕಾರ ದೇಶದಲ್ಲಿನ ಮಾದಕವಸ್ತು ಜಾಲವನ್ನು ವೇಗವಾಗಿ ಭೇದಿಸುತ್ತಿದೆ. ಈ ಸಂಬಂಧ ಇಬ್ಬರ ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ಉದ್ದೇಶ ಡ್ರಗ್ ಮುಕ್ತ ಭಾರತಕ್ಕಾಗಿ ಕೇಂದ್ರ ಶ್ರಮಿಸುತ್ತಿದ್ದು, ಈ ಕಾರ್ಯಾಚರಣೆ ಇದರ ಭಾಗವಾಗಿದೆ. ಈ ಆಪರೇಷನ್ ಯಶಸ್ವಿಗೊಳಿಸಿದ ಎನ್‌ಸಿಬಿ ಮತ್ತು ದೆಹಲಿ ಪೊಲೀಸರಿಗೆ ಅಭಿನಂದನೆಗಳು ಎಂದು ಅಮಿತ್ ಶಾ ಬರೆದುಕೊಂಡಿದ್ದಾರೆ.



