Latest

*ಕರೆಂಟ್ ಶಾಕ್ ಗೆ ವ್ಯಕ್ತಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಒಲೆ ದುರಸ್ತಿ ಕೆಲಸ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಹೊಸದುರ್ಗ ತಾಲೂಕಿನ ಮತ್ತೋಡು ಹೋಬಳಿಯ ದೊಡ್ಡತೇಕಲವಟ್ಟಿ ಗ್ರಾಮದಲ್ಲಿ ನಡೆದಿದೆ.

38 ವರ್ಷದ ಮಾರುತಿ ಮೃತ ದುರ್ದೈವಿ. ಮನೆಯಲ್ಲಿ ಒಲೆ ದುರಸ್ತಿ ಮಡುತ್ತಿದ್ದಾಗ ಕೈಯಲ್ಲಿದ್ದ ಕಬ್ಬಿಣದ ಹಾರೆಯನ್ನು ರಭಸದಿಂದ ಹಿಂದಕ್ಕೆ ತೆಗೆದಾಗ ವಿದ್ಯುತ್ ಸ್ವಿಚ್ ಬೋರ್ಡ್ ಗೆ ತಗುಲಿದೆ. ಇದರಿಂದ ಏಕಾಏಕಿ ಕರೆಂಟ್ ಪ್ರವಿಹಿಸಿದ್ದು, ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button