EducationKarnataka NewsLatest

*ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಬಿಗ್ ಶಾಕ್*

ಶುಲ್ಕ ಹೆಚ್ಚಳ

Home add -Advt

ಪ್ರಗತಿವಾಹಿನಿ ಸುದ್ದಿ: ರಾಜ್ಯ ಸರ್ಕಾರವು 2026-27ನೇ ಸಾಲಿನ ಎಂಜಿನಿಯರಿಂಗ್ ಶುಲ್ಕವನ್ನು ಶೇ 7.5 ರಷ್ಟು ಏರಿಕೆ ಮಾಡಿದೆ. ಸತತ ಎರಡನೇ ವರ್ಷವೂ ಶುಲ್ಕ ಹೆಚ್ಚಳವಾಗುತ್ತಿರುವುದರಿಂದ ಸಿಇಟಿ ಮೂಲಕ ಸೀಟು ಪಡೆಯುವ ವಿದ್ಯಾರ್ಥಿಗಳು ಹೆಚ್ಚಿನ ಹಣ ಪಾವತಿಸಬೇಕಾಗಿದೆ.

ಹೊಸ ಶೈಕ್ಷಣಿಕ ವರ್ಷ ಆರಂಭಕ್ಕೂ ಮೊದಲೇ ಇಂಜಿನಿಯರ್ ಆಗಬೇಕೆಂದು ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳಿಗೆ ಶಾಕ್ ಆಗಿದೆ. 2026-27ನೇ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲು ಸರ್ಕಾರ ತೀರ್ಮಾನಿಸಿದ್ದು, ಮಧ್ಯಮ ವರ್ಗದ ಪೋಷಕರಿಗೆ ಇದು ಆರ್ಥಿಕ ಹೊರೆಯಾಗಿ ಪರಿಣಮಿಸಿದೆ.

ಖಾಸಗಿ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಡಿ (CET) ಸೀಟು ಪಡೆಯುವ ವಿದ್ಯಾರ್ಥಿಗಳು ಇನ್ನು ಮುಂದೆ ಹೆಚ್ಚಿನ ಹಣ ಪಾವತಿಸಬೇಕಿದೆ.

ಟೈಪ್-1 ಕಾಲೇಜುಗಳು: ಪ್ರಸ್ತುತ ಇರುವ 81,800 ರೂ. ಶುಲ್ಕವು ಇನ್ನು ಮುಂದೆ 87,935 ರೂ. ಗೆ ಏರಿಕೆಯಾಗಲಿದೆ.
ಟೈಪ್-2 ಕಾಲೇಜುಗಳು: ಪ್ರಸ್ತುತ ಇರುವ 91,000 ರೂ. ಶುಲ್ಕವು ಇನ್ನು ಮುಂದೆ 97,825 ರೂ. ಗೆ ಏರಲಿದೆ.

ಕಳೆದ 2025-26ನೇ ಸಾಲಿನಲ್ಲಿಯೂ ಸಹ ಶುಲ್ಕವನ್ನು ಶೇ 7.5 ರಷ್ಟು ಹೆಚ್ಚಿಸಲಾಗಿತ್ತು. ಇದೀಗ ಸತತ ಎರಡನೇ ವರ್ಷವೂ ಶುಲ್ಕ ಏರಿಕೆಯಾಗುತ್ತಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

Related Articles

Back to top button