Kannada NewsLatest

ಬಸವರಾಜ ಹಟ್ಟಿಹೊಳಿ ಹೆಸರಲ್ಲಿ ಧಾರವಾಡ ಕೆಸಿಡಿಯಲ್ಲಿ ಗೋಲ್ಡ್ ಮೆಡಲ್ ಸ್ಥಾಪನೆ – ಚನ್ನರಾಜ ಹಟ್ಟಿಹೊಳಿ ಘೋಷಣೆ

ಪ್ರಗತಿವಾಹಿನಿ ಸುದ್ದಿ, ಧಾರವಾಡ – ಕರ್ನಾಟಕ ವಿಶ್ವವಿದ್ಯಾಲಯದ ಕೆಸಿಡಿ ಕಾಲೇಜಿನ ಮಾಸ್ಟರ್ ಇನ್ ಟೂರಿಸಮ್ ಮತ್ತು ಟ್ರಾವೆಲ್ಸ್ ಮ್ಯಾನೆಜ್‌ಮೆಂಟ್‌ ವಿಭಾಗದಲ್ಲಿ ಮೊದಲ ಸ್ಥಾನ ಪಡೆದವರಿಗಾಗಿ ತಂದೆಯವರಾದ ದಿ.ಬಸವರಾಜ ಹಟ್ಟಿಹೊಳಿ ಹೆಸರಿನಲ್ಲಿ ಗೋಲ್ಡ್ ಮೆಡಲ್ ಸ್ಥಾಪನೆ ಮಾಡುವುದಾಗಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಘೋಷಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕೆಸಿಡಿ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದು ಕಾರ್ಯಕ್ರಮದಲ್ಲಿ ಈ ವರ್ಷ ಪ್ರಥಮ ಸ್ಥಾನ ಪಡೆದ ಸ್ಮಿತಾ ಸಾಲಿ ಎನ್ನುವ ವಿದ್ಯಾರ್ಥಿನಿಗೆ ಬಂಗಾರದ ಪದಕ ಘೋಷಿಸಿದ ಚನ್ನರಾಜ ಹಟ್ಟಿಹೊಳಿ, ಪ್ರತಿ ವರ್ಷ ತಂದೆಯವರ ಹೆಸರಿನಲ್ಲಿ ಗೋಲ್ಡ್ ಮೆಡಲ್ ನೀಡುವುದಾಗಿ ಪ್ರಕಟಿಸಿದರು.
ಮಾಸ್ಟರ್ ಇನ್ ಟೂರಿಸಮ್ ಮತ್ತು ಟ್ರಾವೆಲ್ಸ್ ಮ್ಯಾನೆಜ್‌ಮೆಂಟ್‌ ವಿಭಾಗಕ್ಕೆ ನೀಡುತ್ತಿರುವ ರಾಜ್ಯದ ಪ್ರಪ್ರಥಮ ಗೊಲ್ಡ್ ಮೆಡಲ್ ಇದಾಗಿದೆ. ನನ್ನ ತಂದೆಯವರಾದ ಬಸವರಾಜ ಹಟ್ಟಿಹೊಳಿ ಇದೇ ವಿದ್ಯಾಲಯದಲ್ಲಿ 1967ರ ಸಾಲಿನಲ್ಲಿ ವ್ಯಾಸಂಗವನ್ನು ಮಾಡಿದ್ದು, ಅವರ ಹೆಸರಿನಲ್ಲಿ ಗೋಲ್ಡ್ ಮೆಡಲ್ ನೀಡುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದರು.
​ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕೆ ನಮ್ಮ ಕುಟುಂಬ ಮೊದಲಿನಿಂದಲೂ ಸಾಕಷ್ಟು ಕೊಡುಗೆಗಳನ್ನು ನೀಡುತ್ತ ಬಂದಿದೆ. ಸಹೋದರಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಕ್ಷೇತ್ರದಲ್ಲಿ ಸಾವಿರಾರು ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗಿದ್ದಾರೆ. ಅದರಲ್ಲೂ ಹಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಹಲವಾರು ಯೋಜನೆಗಳನ್ನು ತಂದಿದ್ದೇವೆ. ಮುಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಲವಾರು ಕೊಡುಗೆಗಳನ್ನು ಕೊಡುವ ಯೋಜನೆ ಹೊಂದಿದ್ದೇವೆ ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ತಿಳಿಸಿದರು.​
ಈ ಸಂದರ್ಭದಲ್ಲಿ ಗಿರಿಜಾ ಹಟ್ಟಿಹೊಳಿ, ಡಾ. ಎಸ್ ಚೌಗುಲಾ, ಡಾ. ಬಿ ಕಾರ್ದೊನಿ, ಡಾ. ರಾಜಶೇಖರ್, ವಿದ್ಯಾಲಯದ ಎಲ್ಲ ಪದಾಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button