Latest

ಕೇಂದ್ರ ಸಚಿವ ಶ್ರೀಪಾದ ನಾಯ್ಕ್ ಕಾರು ಅಪಘಾತ: ಪತ್ನಿ ಆಪ್ತಸಹಾಯಕ ದುರ್ಮರಣ

ಪ್ರಗತಿವಾಹಿನಿ ಸುದ್ದಿ, ಅಂಕೋಲಾ – ಕೇಂದ್ರ ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್ ಕಾರು ಅಂಕೋಲಾ ಬಳಿ ಪಲ್ಟಿಯಾಗಿದ್ದು, ಅವರ ಪತ್ನಿ ಹಾಗೂ ಆಪ್ತಸಹಾಯಕ ಮೃತರಾಗಿದ್ದಾರೆ.

ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುವಾಗ ಈ ಅವಘಡ ಸಂಭವಿದೆ. ಗೋವಾದವರಾಗಿರುವ ಶ್ರೀಪಾದ ನಾಯಕ ಅವರು ಪತ್ನಿಯೊಂದಿಗೆ ತೆರಳುತ್ತಿರುವಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

Home add -Advt

ಗಂಭೀರ ಗಾಯಗೊಂಡಿದ್ದ ಪತ್ನಿ ವಿಜಯಾ ಹಾಗೂ ಆಪ್ತ ಸಹಾಯಕ ದೀಪಕ್ ಸಾವಿಗೀಡಾಗಿದ್ದಾರೆ. ಶ್ರೀಪಾದ ನಾಯಕ ಸಹ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

 

 

Related Articles

Back to top button