Latest

ಕೆಪಿಸಿಸಿ ವಕ್ತಾರರ ಮನೆಯ ಬಳಿಯೇ ಗಾಂಜಾ ಬೆಳೆ; ಪೊಲೀಸರಿಗೆ ಮಾಹಿತಿ ನೀಡಿದ ಬೇಳೂರು ಗೋಪಾಲಕೃಷ್ಣ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಗರ ಪ್ರದೇಶಗಳಲ್ಲಿ ಗಾಂಜಾ ಬೆಳೆದ ಸ್ಥಳವನ್ನು ಗುರುತಿಸಿ ಅಪರಾಧಿಗಳನ್ನ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ ಕಣ್ಣು ಮುಚ್ಚಿಕೊಂಡು ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರಕ್ಕೆ ಎಚ್ಚರಿಸುವ ಕೆಲಸ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಬೇಳೂರು ಗೋಪಾಲಕೃಷ್ಣ  ಮಾಡಿದ್ದಾರೆ.

ಹೌದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಬೆಳೆಗಳ ನಡುವೆ ಗೌಪ್ಯವಾಗಿ ಗಾಂಜಾ ಬೆಳೆಯುತ್ತಿರುವ ಮತ್ತು ಮಾರಾಟ ಮಾಡುವ ವಿಷಯ ಕೇಳಲಾಗುತ್ತಿತ್ತು. ಆದರೀಗ ಇದು ನಗರಪ್ರದೇಶದವರೆಗೂ ಹಬ್ಬಿರುವುದು ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರುರವರು ಪತ್ತೆಹಚ್ಚಿದ್ದಾರೆ. ಬೆಂಗಳೂರಿನ ಆರ್ ಟಿ ನಗರದ ಅವರ ನಿವಾಸದ ಆಸುಪಾಸಿನಲ್ಲಿಯೇ ಬೆಳೆದಿದ್ದನ್ನು ಗಮನಿಸಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಪೋಲೀಸ್ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Home add -Advt

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕರು ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲಕೃಷ್ಣ ಬೇಳೂರುರವರು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಗಾಂಜಾ ಬೆಳೆಯುವ ಅಥವಾ ಮಾರಾಟ ಮಾಡುವುದನ್ನ ಕೇಳಿ ಬರುತ್ತಿತ್ತು ಆದರೀಗ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೂ ಆಶ್ಚರ್ಯದ ಸಂಗತಿಯೆಂದರೆ ತಪ್ಪಾಗಲಾರದು. ಯುವ ಸಮುದಾಯವನ್ನು ಹಾಳು ಮಾಡುವ ಗಾಂಜಾ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದ್ದ ಪೋಲೀಸ್ ಇಲಾಖೆ ಇಲ್ಲಿ ಗಾಂಜ ಬೆಳೆಯುವವರಿಗೆ ಸಹಕಾರ ನೀಡುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ ಎಂದು ಆರೋಪಿಸಿದರು.

ಬೆಂಗಳೂರಿನಂತಹ ಮಹಾನಗರದಲ್ಲಿಯೇ ಈ ರೀತಿ ರಾಜಾರೋಷವಾಗಿ ಗಾಂಜಾವನ್ನು ಬೆಳೆಯುತ್ತಿದ್ದಾರೆ ಎಂದರೆ ರಾಜ್ಯ ಸರ್ಕಾರದ ಗೃಹ ಸಚಿವರೇನು ಕಣ್ಣು ಮುಚ್ಚಿಕೊಂಡಿದ್ದಾರೆಯೇ, ರಾಜ್ಯದ ಆಡಳಿತ ನಡೆಸುತ್ತಿರುವವರೇ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುವುದರಲ್ಲಿ ಅನುಮಾನವಿಲ್ಲ ಎಂದರು.

ಒಂದೂವರೆ ತಿಂಗಳೊಳಗೆ ಬಾಕಿ ಇರುವ ಮನೆಗಳ ಹಸ್ತಾಂತರ; ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ

Related Articles

Back to top button