ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ತಾನು ಡಿಆರ್ ಡಿಓ ಕಮಾಂಡರ್ ಎಂದು ಹೇಳಿಕೊಂಡು ಮಿಲಿಟರಿ ಡ್ರೆಸ್ ಹಾಕಿಕೊಂಡು ಯುವತಿಯೋರ್ವಳು ಬರೋಬ್ಬರಿ 5 ಕೋಟಿ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಯುವತಿ 5 ಕೋಟಿಗೂ ಅಧಿಕ ಹಣ ವಂಚಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಸ್ತುತ ಬಯ್ಯಪ್ಪನಹಳ್ಳಿ ಪೊಲೀಸರು ಆರೋಪಿ ಯುವತಿ ಅಸ್ಸಾಂ ಮೂಲದ ದರಶನಾ ಭಾರದ್ವಾಜ್ ಎಂಬುವವಳನ್ನು ಬಂಧಿಸಿದ್ದಾರೆ.
ದರ್ಶನಾ ವಿರುದ್ಧ ಬೆಣ್ಗಳೂರಿನ ಮೂರು ಠಾಣೆಗಳಲ್ಲಿ ಎಫ್ ಐ ಆರ್ ದಾಖಲಾಗಿದೆ. ಸೇನೆ ಹೆಸರಲ್ಲಿ ಡಿಆರ್ ಡಿ ಒ ಕಮಾಂಡರ್ ಎಂದು ಹೇಳಿಕೊಂಡು ಸೇನೆಯ ಕಟ್ಟಡ ನಿರ್ಮಾಣ ಹಾಗೂ ಮೇಂಟೆನೆನ್ಸ್ ಟೆಂಡರ್ ಕೊಡಿಸುವುದಾಗಿ ವಂಚಿಸುತ್ತಿದ್ದಳು. ಸುಮಾರು 66 ಕೋಟಿ ಪ್ರಾಜೆಕ್ಟ್ ಕೊಡಿಸುವುದಾಗಿ ಹೇಳಿ ಮೂವರು ಬಿಲ್ಡರ್ ಗಳಿಗೆ 5 ಕೋಟಿಗೂ ಅಧಿಕ ಹಣ ವಂಚಿಸಿದ್ದಾಳೆ. ಆರೋಪಿ ಯುವತಿಯನ್ನು ಬಂಧಿಸಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ