Film & EntertainmentKannada NewsLatest

*ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳ್ತಿದ್ದಾರಂತೆ ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ!!*

ಪ್ರಗತಿವಾಹಿನಿ ಸುದ್ದಿ; ಮುಂಬೈ: ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್. ಮದುವೆಯಾದ 18 ವರ್ಷದ ಬಳಿಕ ವಿಚ್ಛೇದನ‌ ನೀಡಲು ಮುಂದಾಗಿದ್ದಾರೆ ಫರ್ದೀನ್ ಖಾನ್ ದಂಪತಿ.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಮತ್ತೊಂದು ಬ್ರೇಕಪ್ ಸುದ್ದಿ ಇದೀಗ ಎಲ್ಲೆಡೆ ಸುದ್ದಿಯಾಗ್ತಿದೆ. ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಫರ್ದೀನ್ ಖಾನ್ ಮತ್ತು ನತಾಶಾ ಮಾಧ್ವಾನಿ ಇದೀಗ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಆದರೆ ಇಬ್ಬರ ನಡುವಿನ ಅಂತರ ಹಾಗೂ ವಿಚ್ಛೇದನಕ್ಕೆ ಕಾರಣ ಏನೆಂಬುದು ತಿಳಿದು ಬಂದಿಲ್ಲ.

ಇಬ್ಬರ ನಡುವೆ ಅನೇಕ ವಿಷಯಗಳಲ್ಲಿ ವಾದಗಳು ಹೆಚ್ಚಾಗತೊಡಗಿದವು. ಇಬ್ಬರೂ ಪರಿಸ್ಥಿತಿಯನ್ನು ಎದುರಿಸಲು ಸಾಧ್ಯವಾಗದಿದ್ದಾಗ, ಇನ್ನೊಬ್ಬರ ಶ್ರೇಯೋಭಿವೃದ್ಧಿಗಾಗಿ ಕಳೆದೊಂದು ವರ್ಷದಿಂದ ತಮ್ಮ ಪ್ರತ್ಯೇಕ ದಾರಿಯಲ್ಲಿ ಹೋಗುತ್ತಾರೆ’ ಎಂದು ಅವರ ನಿಕಟವರ್ತಿಯೊಬ್ಬರು ಖಾಸಗಿ ವಾಹಿನಿಯ ಪೋರ್ಟಲ್‌ಗೆ ತಿಳಿಸಿದ್ದಾರೆ.

ಫರ್ದೀನ್ ಪ್ರಸ್ತುತ ತನ್ನ ತಾಯಿಯೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ, ಆದರೆ ನತಾಶಾ ತನ್ನ ಮಕ್ಕಳೊಂದಿಗೆ ಲಂಡನ್‌ನಲ್ಲಿ ವಾಸಿಸುತ್ತಿದ್ದಾರೆ.

ಫಿರೋಜ್ ಮತ್ತು ಮುಮ್ತಾಜ್ ಕೂಡ ಅನೇಕ ಹಿಟ್ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಫರ್ದೀನ್ ದೀರ್ಘಕಾಲದವರೆಗೆ ಬಾಲಿವುಡ್‌ನಿಂದ ದೂರವಿದ್ದರು. ಆದರೆ ಈಗ ಅವರ ಪುನರಾಗಮನದ ವದಂತಿ ಬೆಳಕಿಗೆ ಬಂದಿವೆ. ಅವರು ರಿತೇಶ್ ದೇಶ್‌ಮುಖ್ ಅವರೊಂದಿಗೆ ಚಿತ್ರ ಮಾಡುತ್ತಿದ್ದಾರೆ. 2005 ರ ಹಿಟ್ ಚಿತ್ರ ನೋ ಎಂಟ್ರಿಯ ಮುಂದುವರಿದ ಭಾಗದಲ್ಲೂ ಫರ್ದೀನ್ ಕಾಣಿಸಿಕೊಳ್ಳಬಹುದು.



Related Articles

Back to top button