Kannada NewsLatest
ಶಾಹಿದ್ ಆಫ್ರೀದಿ ಪುತ್ರಿಯನ್ನು ಎರಡನೇ ಬಾರಿ ಮದುವೆಯಾಗಲಿದ್ದಾರೆ ವೇಗದ ಬೌಲರ್ ಶಾಹೀನ್ ಆಫ್ರೀದಿ!

ಪ್ರಗತಿವಾಹಿನಿ ಸುದ್ದಿ, ಕರಾಚಿ: ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರೀದಿ ಅವರ ಪುತ್ರಿ ಅನ್ಶಾ ಆಫ್ರೀದಿ ಅವರನ್ನು ಎರಡನೇ ಬಾರಿ ಮದುವೆಯಾಗಲು ವೇಗದ ಬೌಲರ್ ಶಾಹೀನ್ ಆಫ್ರೀದಿ ಸಜ್ಜಾಗಿದ್ದಾರೆ.
ಸದ್ಯ ಏಷ್ಯಾಕಪ್-2023 ಪಂದ್ಯದಲ್ಲಿ ನಿರತರಾಗಿರುವ ಶಾಹೀನ್ ಕಾಂಟಿನೆಂಟಲ್ ಈವೆಂಟ್ನ ಫೈನಲ್ ಪಂದ್ಯ ಮುಗಿದ 2 ದಿನಗಳ ನಂತರ ಅಂದರೆ, ಸೆ. 19 ರಂದು ಎರಡನೇ ಬಾರಿ ವಿವಾಹವಾಗಲಿದ್ದಾರೆ. ಸೆ.21ರಂದು ಇಸ್ಲಾಮಾಬಾದ್‌ನಲ್ಲಿ ಆರತಕ್ಷತೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಈ ವೇಳೆ ಗಣ್ಯರು ಭಾಗವಹಿಸಲಿದ್ದಾರೆ.
ಶಾಹೀನ್ ಅಫ್ರಿದಿ ಮತ್ತು ಅನ್ಶಾ ಈ ವರ್ಷದ ಫೆಬ್ರವರಿಯಲ್ಲಿ ಅಫ್ರಿದಿ ಬುಡಕಟ್ಟು ಸಂಪ್ರದಾಯದಂತೆ ಹಿರಿಯರ ಹಾಗೂ ಹತ್ತಿರದ ಸಂಬಂಧಿಗಳ ಸಮ್ಮುಖದಲ್ಲಿ ಸರಳವಾಗಿ ವಿವಾಹವಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ