Kannada NewsKarnataka NewsLatest

ಕಡಲ ತೀರದಲ್ಲಿ ಅಪರೂಪದ ಪ್ರಭೇದದ ಭಾರಿ ತಿಮಿಂಗಲದ ಕಳೆಬರ ಪತ್ತೆ

ಪ್ರಗತಿವಾಹಿನಿ ಸುದ್ದಿ, ಕಾರವಾರ: ಜಿಲ್ಲೆಯ ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರದಲ್ಲಿ ಭಾರೀ ಗಾತ್ರದ ಬಲೀನ್ ತಿಮಿಂಗಲದ ಮೃತದೇಹ ಪತ್ತೆಯಾಗಿದೆ.

ಮೃತಪಟ್ಟ ತಿಮಿಂಗಲ 46 ಅಡಿ ಉದ್ದ 9 ಅಡಿ ಎತ್ತರವಿದೆ. ಜಾಗತಿಕ ಮಟ್ಟದಲ್ಲಿ ಅಳಿವಿನಂಚಿನಲ್ಲಿರುವ ಪ್ರಭೇದ ಎಂದು ಪರಿಗಣಿಸಲಾಗುವ ಬಲೀನ್ ಜಾತಿಯ ತಿಮಿಂಗಲಗಳು 102 ಅಡಿವರೆಗೂ ಬೆಳೆಯುತ್ತವೆ.

Home add -Advt

ಇಂದು ಬೆಳಗ್ಗೆ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರು ತಿಮಿಂಗಲದ ಮೃತದೇಹ ದಂಡೆಯಲ್ಲಿ ಬಂದು ಬಿದ್ದಿರುವುದನ್ನು ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.

ಈ ತಿಮಿಂಗಲ ಮೃತಪಟ್ಟು ಹಲವು ದಿನಗಳಾಗಿದ್ದು ಅದರ ಸಾವಿಗೆ ಕಾರಣ ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆ ನಂತರವೇ ಎಲ್ಲ ವಿವರಗಳು ತಿಳಿದುಬರಬೇಕಿದೆ.

Related Articles

Back to top button