Latest

ಕೆಲಸದಾಳಿಗೆ ಹೊಡೆದ ಗುಂಡು ಮಗನ ತಲೆಗೆ ಬಡಿಯಿತು!

ಪ್ರಗತಿವಾಹಿನಿ ಸುದ್ದಿ; ಮಂಗಳೂರು: ಅಪ್ಪನೆ ಮಗನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಮಂಗಳೂರು ನಗರದ ಮಾರ್ಗನ್ಸ್ ಗೇಟ್ ಬಳಿ ನಡೆದಿದೆ.

14 ವರ್ಷದ ಬಾಲಕ ಸುಧೀಂದ್ರ ಪ್ರಭು ಗುಂಡಿನ ದಾಳಿಯಿಂದ ಗಾಯಗೊಂದಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಂದೆ ರಾಜೇಶ್ ಪ್ರಭು ಕೆಲಸದಾಳಿನ ಮೇಲೆ ಗುರಿಯಿಟ್ಟು ನಡೆಸಿದ್ದ ಫೈರಿಂಗ್ ಗುರಿ ತಪ್ಪಿ ಮಗನ ತಲೆಗೆ ತಗುಲಿದೆ.

ಮಂಗಳೂರಿನ ವೈಷ್ಣವಿ ಕಾರ್ಗೋ ಲಿ. ಕಚೇರಿಯಲ್ಲಿ ಹಾಡಹಗಲೇ ಈ ಶೂಟೌಟ್ ಘಟನೆ ನಡೆದಿದೆ. ಸಂಬಳದ ವಿಚಾರವಾಗಿ ಕೆಲಸದಾಳಿನ ಜೊತೆ ಮಾಲೀಕ ರಾಜೇಶ್ ಪ್ರಭು ಜಟಾಪಟಿಗಿಳಿದಿದ್ದ. ಸಂಬಳ ಕೇಳಲೆಂದು ಕೆಲಸದಾಳು ಫ್ಯಾಕ್ಟರಿ ಬಳಿ ಬಂದಿದ್ದ. ಈ ವೇಳೆ ಮಾಲೀಕ ಹಾಗೂ ಕೆಲಸದಾಳು ನಡುವೆ ವಾಗ್ವಾದ ಆರಂಭವಾಗಿದೆ. ಕೆಲಸದಾಳಿನ ಮೇಲೆ ರಾಜೇಶ್ ಪ್ರಭು ಫೈರಿಂಗ್ ನಡೆಸಲು ಮುಂದಾಗಿದ್ದಾರೆ. ಆದರೆ ಗುರಿ ತಪ್ಪಿ ಗುಂಡು ಮಗನಿಗೆ ತಗುಲಿದೆ.

ಮಗನ ತಲೆಗೆ ಗಾಯವಾಗಿದ್ದು, ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Home add -Advt

ರೈತರ ಮೇಲೆ ಹರಿದ ಎರಡು ಕಾರು; ಭೀಕರ ದೃಶ್ಯದ ವಿಡಿಯೋ ವೈರಲ್

RSS ನ 4 ಸಾವಿರ IAS, IPSಗಳು; ದೇಶದ ಆಡಳಿತ ವ್ಯವಸ್ಥೆಯಲ್ಲಿ ಆರ್.ಎಸ್.ಎಸ್ ಆರ್ಭಟ; ಹೆಚ್ ಡಿಕೆ ಗಂಭೀರ ಆರೋಪ

Related Articles

Back to top button