Kannada NewsKarnataka NewsLatest

*ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ: ಜಂಟಿ ಸಂಸತ್ ಸಮಿತಿಗೆ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಆಯ್ಕೆ*

ಎಫ್‌ಸಿಆರ್‌ಎ ತಿದ್ದುಪಡಿ ಮಸೂದೆ: ಜಂಟಿ ಸಂಸತ್ ಸಮಿತಿಗೆ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಆಯ್ಕೆ

ಪ್ರಗತಿವಾಹಿನಿ ಸುದ್ದಿ/ ಬೆಂಗಳೂರು/ನವದೆಹಲಿ: ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ತಿದ್ದುಪಡಿ ಮಸೂದೆ–2026ರ ಪರಿಶೀಲನೆಗಾಗಿ ರಚಿಸಲಾಗಿರುವ ಸಂಸತ್ತಿನ ಜಂಟಿ ಸಮಿತಿಗೆ ಕರ್ನಾಟಕದ ಸಂಸದ ತೇಜಸ್ವಿ ಸೂರ್ಯ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ಲೋಕಸಭೆಯ 21 ಹಾಗೂ ರಾಜ್ಯಸಭೆಯ 10 ಸದಸ್ಯರು ಸೇರಿದಂತೆ ಒಟ್ಟು 31 ಸದಸ್ಯರನ್ನು ಒಳಗೊಂಡ ಜಂಟಿ ಸಮಿತಿ ರಚಿಸಲಾಗಿದೆ. ಲೋಕಸಭೆ ಸದಸ್ಯರ ಪಟ್ಟಿಯಲ್ಲಿ ತೇಜಸ್ವಿ ಸೂರ್ಯ ಅವರ ಹೆಸರು ಮೂರನೇ ಕ್ರಮಾಂಕದಲ್ಲಿದೆ.
ಸಮಿತಿಯಲ್ಲಿ ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರಿಗೆ ಅವಕಾಶ ಕಲ್ಪಿಸಲಾಗಿದೆ. ಲೋಕಸಭೆಯಿಂದ ಡಾ. ಸಂಜಯ್ ಜೈಸ್ವಾಲ್, ಭರ್ತೃಹರಿ ಮಹತಾಬ್, ತೇಜಸ್ವಿ ಸೂರ್ಯ, ಕಮಲೇಶ್ ಜಾಂಗ್ಡೆ, ನಿಶಿಕಾಂತ್ ದುಬೆ, ಅರವಿಂದ ಧರ್ಮಪುರಿ, ಆಂಟೋ ಆಂಟನಿ, ಸುಪ್ರಿಯಾ ಸುಳೆ ಸೇರಿದಂತೆ 21 ಸದಸ್ಯರು ಇದ್ದಾರೆ.
ರಾಜ್ಯಸಭೆಯಿಂದ ಸಿ. ಸದಾನಂದನ್ ಮಾಸ್ಟರ್, ಹರ್ಷವರ್ಧನ್ ಶೃಂಗ್ಲಾ, ಉಜ್ವಲ್ ದೇವರಾವ್ ನಿಕಮ್, ಡಾ. ಅಲ್ಕಾ ಗುರ್ಜರ್ ಸೇರಿದಂತೆ 10 ಸದಸ್ಯರನ್ನು ಸಮಿತಿಗೆ ನೇಮಕ ಮಾಡಲಾಗಿದೆ.
ವಿದೇಶಿ ಮೂಲಗಳಿಂದ ಬರುವ ಕೊಡುಗೆಗಳು ಹಾಗೂ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಕಾನೂನು ಚೌಕಟ್ಟಿನಲ್ಲಿ ತಿದ್ದುಪಡಿ ತರಲು ಉದ್ದೇಶಿಸಿರುವ FCRA ತಿದ್ದುಪಡಿ ಮಸೂದೆಯನ್ನು ಸಮಿತಿ ಪರಿಶೀಲಿಸಲಿದೆ.
ಕರ್ನಾಟಕದಿಂದ ಪ್ರಮುಖ ಯುವ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರಿಗೆ ಇಂತಹ ಮಹತ್ವದ ಸಂಸದೀಯ ಸಮಿತಿಯಲ್ಲಿ ಸ್ಥಾನ ದೊರೆತಿರುವುದು ಗಮನಾರ್ಹವಾಗಿದೆ.

Home add -Advt

Related Articles

Back to top button