National

*ಅಗ್ನಿ ಅವಘಡ: ಬಾಲಕ ಸೇರಿ ಐವರ ಸಾವು*

ಪ್ರಗತಿವಾಹಿನಿ ಸುದ್ದಿ: ಅಂಗಡಿ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಹತ್ತು ವರ್ಷದ ಬಾಲಕ ಸೇರಿದಂತೆ ಐವರು ಮೃತಪಟ್ಟಿರುವ ಘಟನೆ ಮುಂಬೈಯಿಯ ಚೆಂಬೂರಿನಲ್ಲಿ ನಡೆದಿದೆ. 

ಮೃತರನ್ನು ಪರೀಸ್ ಗುಪ್ತಾ(7), ಮಂಜು ಪ್ರೇಮ್ ಗುಪ್ತಾ(30), ಅನಿತಾ ಗುಪ್ತಾ(39) ಪ್ರೇಮ್ ಗುಪ್ತಾ( 30) ಹಾಗೂ ನರೇಂದ್ರ ಗುಪ್ತಾ (10) ಎಂದು ಗುರುತಿಸಲಾಗಿದೆ.

ಚೆಂಬೂರಿನ ಸಿದ್ದಾರ್ಥ ಕಾಲನಿಯ ತಮ್ಮ ನಿವಾಸದಲ್ಲಿಯೇ ಅಂಗಡಿಯನ್ನು ನಡೆಸುತ್ತಿದ್ದ ಗುಪ್ತಾ ಕುಟುಂಬ ಅದರ ಸಮೀಪವೇ ಇದ್ದ ದಾಸ್ತಾನು ಸಂಗ್ರಹದ ಬಳಿಯೇ ಮಲಗಿದ್ದರು. ರಾತ್ರೋ ರಾತ್ರಿ ಹೊತ್ತಿಕೊಂಡ ಬೆಂಕಿ ಬೆಳಗ್ಗೆ 5.30 ವೇಳೆಗೆ ಮೊದಲನೇ ಮಹಡಿಗೆ ವ್ಯಾಪಿಸಿತ್ತು. ಗಾಢನಿದ್ರೆಯಲ್ಲಿದ್ದ ಗುಪ್ತಾ ಕುಟುಂಬ ಬೆಂಕಿಯ ಕೆನ್ನಾಲಿಗೆಯಲ್ಲಿ ಸಿಲುಕಿ ಸಜೀವ ದಹನವಾಗಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಕಾರ್ಯಾಚರಣೆ ನಡೆಸಿದರೂ ಕುಟುಂಬದವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅವಘಡಕ್ಕೆ ಕಾರಣ ಏನೆಂದು ಇದುವರೆಗೂ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Home add -Advt

Related Articles

Back to top button