Latest

ಹಳೇ ಗರ್ಲ್ ಫ್ರೆಂಡ್ ಉಂಗುರ ಕದ್ದು ಹೊಸ ಗರ್ಲ್ ಫ್ರೆಂಡ್ ಗೆ ನೀಡಿದ ಭೂಪ

ಪ್ರಗತಿವಾಹಿನಿ ಸುದ್ದಿ; ಫ್ಲೋರಿಡಾ: ವ್ಯಕ್ತಿಯೊಬ್ಬ ತನ್ನ ಹಳೇ ಗರ್ಲ್ ಫ್ರೆಂಡ್ ಗೆ ನಿಡಿದ್ದ ಉಂಗುರವನ್ನೇ ಕದ್ದು, ಹೊಸ ಗರ್ಲ್ ಫ್ರೆಂಡ್ ಗೆ ಕೊಟ್ಟು ಪ್ರಪೋಸ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಫ್ಲೋರಿಡಾದ 48 ವರ್ಷದ ವ್ಯಕ್ತಿ ಕೋಸೆಫ್ ಡೆವಿಡ್ ಈ ಹಿಂದೆಯೇ ಯುವತಿಯೊಬ್ಬಳಿಗೆ ಉಂಗುರವನ್ನು ನೀಡಿ ತನ್ನ ಪ್ರೇಮ ನಿವೇದನೆ ಮಾಡಿಕೊಂಡಿದ್ದ. ಇಬ್ಬರೂ ಚೆನ್ನಾಗಿಯೇ ಇದ್ದರು. ಇತ್ತೀಚೆಗೆ ಆಕೆ ತನ್ನ ಪ್ರಿಯತಮನ ಫೇಸ್ ಬುಕ್ ನೋಡಿದಾಗ ಶಾಕ್ ಆಗಿದ್ದಾಳೆ.

ಕಾರಣ ತನ್ನ ಪ್ರಿಯತಮ ಅದಾಗಲೇ ಬೇರೊಂದು ಹುಡುಗಿಯ ಜೊತೆ ಇರುವುದು ಕಂದುಬಂದಿದೆ. ಅಷ್ಟೇ ಅಲ್ಲ ಫೋಟೋದಲ್ಲಿ ಯುವತಿ ತನ್ನ ಉಂಗುರದ ರೀತಿಯದ್ದೇ ಉಂಗುರ ತೊಟ್ಟಿರುವುದು ಕಂಡುಬಂದಿದೆ. ಅನುಮಾನಬಂದು ತಕ್ಷಣ ತನ್ನ ಆಭರಣದ ಬಾಕ್ಸ್ ಪರಿಶೀಲಿಸಿದ್ದಾಳೆ. ಈ ವೇಳೆ ಉಂಗುರ ಕಳುವಾಗಿರುವುದು ಗೊತ್ತಾಗಿದೆ. ತಕ್ಷಣ ಅಕೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಂತೆಯೇ ಡೆವಿಡ್ ನಾಪತ್ತೆಯಾಗಿದ್ದಾನೆ.

Related Articles

Back to top button