ಸಾರಾಯಿ, ಮಾಂಸಾಹಾರವೇ ಈ ದೇವಿಗೆ ನೈವೇಧ್ಯ
ಪ್ರಗತಿವಾಹಿನಿ ಸುದ್ದಿ, ಗೋಕಾಕ – ಜಾನಪದ ಹಾಡುಗಾರಿಕೆಯ ಚೌಡಕಿ ಪದಗಳ ಜಾತ್ರೆಯೆಂದೇ ಖ್ಯಾತಿಯಾಗಿರುವ ನಗರದ ಕಡಬಗಟ್ಟಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಜಾತ್ರೆಯನ್ನು ದಿ. 13,14 ರಂದು ವಿಶಿಷ್ಠ ಪೂಜಾ ವಿಧಿವಿಧಾನಗಳೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಾತ್ರೆಯ ಸಂದರ್ಭದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ವಿವಿಧ ಭಾಗಗಳಿಂದ ಪ್ರಸಿದ್ದ ಚೌಡಕಿ ಹಾಡುಗಾರರು ಆಗಮಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಜೆ.ಪಿ. ಮುಖಂಡ ಅಶೋಕ ಪೂಜಾರಿ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ನಗರದ ಕಡಬಗಟ್ಟಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ದೇವಿಯ ಪ್ರತಿಷ್ಠಾಪನೆ ದೇವಿ ಆರಾಧಕ ಸತ್ಯಪ್ಪ ಪೂಜೇರಿ ಇವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದ ಕೇಲವೇ ಅವಧಿಯಲ್ಲಿ ದೇವಿಯ ದಿವ್ಯಶಕ್ತಿಯಿಂದ ತನ್ನದೇ ಆದ ಪ್ರಭಾವವನ್ನು ಬಿರುವುದರ ಜೊತೆಗೆ ಬಯಸಿಬರುವ ಭಕ್ತಾಧಿಗಳ ಮನೋಭಿಲಾಷೆ ಈಡೇರಿಸುವ ಪವಿತ್ರ ಕ್ಷೇತ್ರವಾಗಿದೆ ಎಂದರು.
ಇದರ ಜೊತೆಯೇ ದೇವಸ್ಥಾನ ಸಮೀತಿಯ ಸದಸ್ಯರು ಸಹ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವದು ಶ್ಲಾಘನೀಯವಾಗಿದೆ ಎಂದು ಹೇಳಿದರು. ದೂರದಿಂದ ಬರುವ ಭಕ್ತಾಧಿಗಳ ಅನುಕೂಲಕ್ಕಾಗಿ ಈ ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕ್ರಮಕ್ಕೆ ಸರಕಾರ ಮುಂದಾಗಬೇಕೆಂದು ಸರಕಾರವನ್ನು ಆಗ್ರಹಿಸಿದರು.
ದೇವಿ ಆರಾಧಕ ಹಾಸುಕವಿ ಸತ್ಯಪ್ಪ ಪೂಜೇರಿ ಅವರ ದೈವಭಕ್ತಿ ಮತ್ತು ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಯವೈಖರಿ ಅಭಿನಂದನೀಯವಾಗಿದ್ದು, ದೈವಭಕ್ತಿಯ ಜೊತೆಗೆ ಸ್ವತಃ ಶ್ರೇಷ್ಠ ಚೌಡಕಿ ಹಾಡುಗಾರರಾಗಿರುವ ಇವರು ಚೌಡಕಿ ಹಾಡುಗಾರರನ್ನು ಪೊಷಿಸಿ ಪ್ರೋತ್ಸಾಹಿಸುವುದರ ಜೊತೆಗೆ ಜಾನಪದ ಚೌಡಕಿ ಹಾಡುಗಾರಿಕೆಯ ಕಲೆಯನ್ನು ಜೀವಂತ ವಿಡುವ ಬಹುದೊಡ್ಡ ಯೋಗಧಾನವನ್ನು ಜಾನಪದ ಕಲೆಗೆ ನೀಡಿದ್ದಾರೆ ಎಂದು ಅವರ ಸೇವೆಯಲ್ಲಿ ಶ್ಲಾಘಿಸಿದರು.
ದೇವಿಗೆ ಸಾರಾಯಿ ನೈವೇದ್ಯೆ, ದೇವಿಗೆ ಅರ್ಪಿಸಿದ ನೈವೇದ್ಯೆಯನ್ನು ಮನೆಗೆ ಒಯ್ಯದೆ ಅಲ್ಲಿಯೇ ಸ್ವೀಕರಿಸುವುದು, ಮೊದಲದಿನ ಶಾಖಾಹಾರಿ ಪ್ರಸಾದವಾದರೆ, ಎರಡನೇಯ ದಿನ ಮಾಂಸಾಹಾರಿ ಪ್ರಸಾದ ಈ ಜಾತ್ರೆಯ ವೈಶಿಷ್ಟ್ಯಗಳಾಗಿವೆ.
ಈ ಸಂದರ್ಭದಲ್ಲಿ ಮಾಜಿ ನಗರಾಧ್ಯಕ್ಷ ಸಿದ್ಲಿಂಗ ದಳವಾಯಿ, ಅರಣ್ಯ ಅಧಿಕಾರಿಗಳಾದ ಡಿ.ಎಫ್.ಓ. ಡಿ.ದೇವರಾಜ, ಎ.ಎಸ್.ಎಫ್, ಪಾತ್ರೋಟ ಎಮ್.ಕೆ., ಸರಕಾರಿ ಪದವಿ ಪೂರ್ವ ಮಹಾವಿಧ್ಯಾಲಯ ಪ್ರಚಾರ್ಯ ಅರ್ಜುನ ಹಾದಿಮನಿ, ಜಾತ್ರಾ ಸಮೀತಿ ಸಂಚಾಲಕ ಕೆಂಪಣ್ಣಾ ಚಿಂಚಲಿ, ಸಮಾಜ ಸೇವಕ ಪಂಡಿತಪ್ಪ ಕಂಬಳಿ, ದೀಪಕ ರಾಯನ್ನವರ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ