Cancer Hospital 2
Bottom Add. 3

*ಮಹಾತ್ಮ ಗಾಂಧಿ, ಶಾಸ್ತ್ರಿ ಸಮಾಧಿಗೆ ಪುಷ್ಮ ನಮನ ಸಲ್ಲಿಸಿದ ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅವರಿಗೆ ಗೌರವ ಸಲ್ಲಿಸಿದರು, “ಅವರ ಜಾಗತಿಕ ಪ್ರಭಾವವು ಇಡೀ ಮಾನವಕುಲವನ್ನು ಏಕತೆ ಮತ್ತು ಸಹಾನುಭೂತಿಯಿಂದ ಬದುಕಲು ಪ್ರೇರೇಪಿಸುತ್ತದೆ” ಎಂದು ಹೇಳಿದರು.

“ಗಾಂಧಿ ಜಯಂತಿಯ ವಿಶೇಷ ಸಂದರ್ಭದಲ್ಲಿ ನಾನು ಮಹಾತ್ಮ ಗಾಂಧಿ ಅವರಿಗೆ ನಮಸ್ಕರಿಸುತ್ತೇನೆ. ಅವರ ಕಾಲಾತೀತ ಬೋಧನೆಗಳು ನಮ್ಮ ಹಾದಿಯನ್ನು ಬೆಳಗಿಸುತ್ತಲೇ ಇರುತ್ತವೆ. ಮಹಾತ್ಮ ಗಾಂಧಿಯವರ ಪ್ರಭಾವವು ಜಾಗತಿಕವಾಗಿದೆ, ಇಡೀ ಮಾನವಕುಲವನ್ನು ಏಕತೆ ಮತ್ತು ಸಹಾನುಭೂತಿಯ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲು ಪ್ರೇರೇಪಿಸುತ್ತದೆ” ಎಂದು ಹೇಳಿದರು.

ಮುಂದುವರೆದು, “ನಾವು ಯಾವಾಗಲೂ ಅವರ ಕನಸುಗಳನ್ನು ನನಸಾಗಿಸಲು ಕೆಲಸ ಮಾಡೋಣ. ಅವರ ಆಲೋಚನೆಗಳನ್ನು, ಕಾರ್ಯರೂಪಕ್ಕೆ ತರೋಣ” ಎಂದರು.

Bottom Add3
Bottom Ad 2

You cannot copy content of this page