Wanted Tailor2
Cancer Hospital 2
Bottom Add. 3

ಗುಣಗಳ ಗಣಿ ಗಣಪತಿ

ಗಣೇಶನ ಹಬ್ಬವು ಪ್ರತಿವರ್ಷ ಬರುತ್ತದೆ. ಮಹಾರಾಷ್ಟ್ರ ಕರ್ನಾಟಕ, ಆಂಧ್ರ, ಉತ್ತರ ಭಾರತದ ಹಲವಡೆ ಗಣಪನ ಹಬ್ಬಕ್ಕೆ ತನ್ನದೆ ಆದ ಮಹತ್ವ ಇದೆ.ನೇಪಾಳ, ಥೈಲೆಂಡ, ಬರ್ಮ ದೇಶಗಳಲ್ಲಿ ಗಣೇಶನ ಮಂದಿರಗಳುವೆ. ಗಣೇಶನ ಸಹಸ್ರ ನಾಮಗಳು ಇವೆ. ಮುಖ್ಯವಾಗಿ ವಿನಾಯಕ, ವಿಘ್ನರಾಜ, ದ್ವಮಾತುರ, ಎಕದಂತ, ಗಣಾಧೀಶ, ಹೇರಂಭ, ಲಂಬೋದರ, ಗಜಾನನ. ಮಂಗಳಮೂರ್ತಿ.


ಗಣೇಶನು ವಿಷೇಶವಾಗಿ ತಂದು ಪ್ರತಿಷ್ಠಾಪನೆ ಮಾಡಿ, ಪೂಜಿಸಿ, ಆರಾಧಿಸಿ, ಕೊನೆಗೆ ವಿರ್ಸಜನೆ ಮಾಡುತ್ತಾರೆ. ಬದಲಾಗುತ್ತಿರುವ ಈ ವಿದ್ಯುನ್ಮಾನ ಯುಗದಲ್ಲಿ ಒಂದುಕಡೆ ಭಕ್ತಿಯಲ್ಲಿ ಭಾವನೆ ಜಾಸ್ತಿ ಅಗುತ್ತಿದ್ದರೆ, ಇನ್ನೊಂದಕಡೆ ಢಾಂಬಿಕ ಭಕ್ತಿಯಿಂದ ಗಣೇಶನ ರೂಪವು ಬದಲಾಗುತ್ತಿದೆ. ಚಲನಚಿತ್ರ ನಟಗಳ ರೂಪ, ರಾಜಕಿಯ ಪೂಢಾರಿಗಳ ರೂಪ ಗಳಲ್ಲಿ ಕಾಣುಬಹುದು. ಅಶ್ಲೀಲ ಹಾಡುಗಳನ್ನು ಎಲ್ಲಡೆ ಕೆಳಿಬರುತ್ತ್ತದೆ. ಸಾಮರಸ್ಯ, ಏಕತೆ, ಸಂಘಟನೆಯ ಉದ್ದೇಶದಿಂದ `ಲೊಕಮಾನ್ಯ ತಿಲಕರು’ ಪ್ರಾರಂಭಿಸಿದ ಸಾರ್ವಜನಿಕ ಗಣಪನ ಉತ್ಸವ ಇಂದು ವಿಕ್ರಾಳ ರೂಪ ತಾಳಿದೆ. ಗಣಪನ ಸ್ಥಾಪನೆ-ವಿರ್ಸಜನೆಯ ಸಮಯದಲ್ಲಿ ಅನೇಕ ಪ್ರಕಾರದ ಘರ್ಷಣೆ, ಗಲಾಟೆ, ಹಿಂಸೆಯು ನಡೆಯತ್ತಿದೆ. ಇದಕ್ಕೆ ವಿಚಾರವಂತರು, ಬುದ್ಧಿವಾದಿಗಳು, ಚಿಂತಕರು, ಎಲ್ಲರೂ ಸೇರಿದರೆ ಕಡಿವಾಣ ಹಾಕಬಹುದು. ವಾಸ್ತವವಾಗಿ ಗಣಪತಿಯ ಹಬ್ಬವು ನಮಗೆ ಸುಖ, ಶಾಂತಿ ಸಮೃದ್ಧಿ ತರುವ ಹಬ್ಬವಾಗಬೇಕು.


ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಪ್ರತಿಯೊಂದು ಹಬ್ಬವನ್ನು ಅಲೌಕಿಕ ರೀತಿಯಲ್ಲಿ ಆಚರಿಸಲಾಗುತ್ತದೆ. ಅದರ ಸತ್ಯಾಂಶವನ್ನು ನಿರಾಕಾರ ಪರಮಾತ್ಮನ ಜ್ಞಾನದ ಆಧಾರದಿಂದ ತಿಳಿಸಿ ಆಚರಣೆಯಲ್ಲಿ ತರುವುದಕ್ಕೆ ಅಲ್ಲಿ ಮಹತ್ವ ಕೊಡಲಾಗುತ್ತದೆ.


ಗಣಪತಿ ಎಂದರೆ, ಗಣಗಳ-ಸಮೂಹಗಳ ಅಧಿಪತಿ, ವಿಶ್ವದ ಎಲ್ಲ ಮಾನವ ಸಮಾಜಕ್ಕೆ ಒಡೆಯ. ಸರ್ವಗುಣಗಳಧಾರಿ, ಸರ್ವವಿದ್ಯೆಗಳಲ್ಲಿ ಪಾರಂಗತನು, ಅವನಿಗೆ ಎಕದಂತ, ಮಂಗಳಮೂರ್ತಿ, ವಿಘ್ನೇಶ್ವರ, ದು:ಖಹರ್ತ, ಸುಖಕರ್ತ, ಲಂಬೊದರ, ವಿನಾಯಕ, ಗಜಮುಖ, ಮೂಷಕವಾಹನ, ಮೋದಕಪ್ರೀಯ, ಮುಂತಾದ ಅನೇಕ ಹೆಸರುಗಳಿವೆ. ಸರ್ವರ ಮಂಗಳಕಾರಿ ಆಗಿರುವದರಿಂದ ಅವನಿಗೆ ಮಂಗಳಮೂರ್ತಿ ಎಂದು, ವಿಘ್ನಗಳನ್ನು ವಿನಾಶ ಮಾಡುವದರಿಂದ ವಿಘ್ನೇಶ್ವರ ಎಂದು, ದು:ಖವನ್ನು ಹರಿಸಿ ಸುಖವನ್ನು ಕೊಡುವದರಿಂದ, ದು:ಖಹರ್ತ-ಸುಖಕರ್ತ ವೆಂದು, ಅವನ ಮಹಿಮೆ ಇದೆ. ಲಂಬೋದರ ಅಂದರೆ ವಿಶಾಲ ಹೊಟ್ಟೆ ಅರ್ಥಾತ ಎಲ್ಲರ ಅಪರಾಧ ಗಳನ್ನು ತನ್ನ ಹೊಟ್ಟೆಗೆ ಹಾಕಿ ಕ್ಷಮೆ ಮಾಡುವವನು ಎಂದು. ಇಲಿ ಚಂಚಲ ಮನಸ್ಸಿನ ಸಂಕೇತವಾಗಿದೆ. ಕಂಪ್ಯೂಟರನಲ್ಲಿ ಹೇಗೆ ಮೌಸ್‌ನಿಂದ ಯಾವುದೆ ಕೆಲಸ ಮಾಡಬಹುದು ಹಾಗೆಯೇ ಇಲಿಯ ಮೇಲೆ ಸವಾರಿಯು, ಮನಸ್ಸು ಬುದ್ಧಿಯ ಮೇಲೆ ನಿಯಂತ್ರಣ ಮಾಡುವ ಸಂಕೇತವಾಗಿದೆ. ಗಜಮುಖ ಬಲಶಾಲಿ ಅಥವಾ ಶಕ್ತಿಯ ಪ್ರತೀಕವಾಗಿದೆ. ಮೋದಕಪ್ರಿಯವೆಂದರೆ ಸ್ನೇಹ ಮತ್ತು ಮಧುರತೆಯ ಸಂಕೇತವಾಗಿದೆ.


ಗಣೇಶನ ಮೂರ್ತಿಯು ಮಣ್ಣಿನಿಂದ ತಯಾರಿಸಿ ಬಣ್ಣವನ್ನು ಹಚ್ಚಿಸಿ, ಶೃಂಗಾರ ಮಾಡಿ ಪೂಜೆ ಮಾಡುವರು. ಕೆಲವು ದಿನಗಳ ನಂತರ ಗಣಪನ ವಿರ್ಸಜನೆ ಮಾಡುವರು. ಇದರ ನಿಜ ಅರ್ಥ ಮಾನವನ ವಿನಾಶಿ ಶರೀರವು ಪಂಚತತ್ವಗಳಿಂದ ತಯಾರವಾಗಿದೆ. ನಾವು ಆತ್ಮ, ಜಾತಿ ಇಲ್ಲದ ಜ್ಯೋತಿ ಎಂದು ತಿಳಿದು ದಿವ್ಯಗುಣಗಳ ಶೃಂಗಾರ ಮಾಡಿದಾಗ, ಪೂಜೆಗೆ ಯೋಗ್ಯರಾಗುವೆವು. ಗುಣಗಳ ಧಾರಣೆ ದೇಹಾಭಿಮಾನದ ಮೂಲವಾಗಿರುವ ಪಂಚವಿಕಾರಗಳ ತ್ಯಾಗದಿಂದ ಆಗುವದು. ಬ್ರಹ್ಮಚಾರಿ ವಿನಾಯಕನಿಗೆ ಎರಡು ಪತ್ನಿಯರು ಸಿದ್ಧಿ ಮತ್ತು ಬುದ್ಧಿ ಎಂದು. ಇದರ ಅರ್ಥ ಪ್ರವೃತ್ತಿ ಮಾರ್ಗದಲ್ಲಿ ಇದ್ದರೂ ನಾವು ಪವಿತ್ರತೆಯ ಬಲದಿಂದ ಸಿದ್ಧಿ ಮತ್ತು ಬುದ್ಧಿಯ ಪ್ರಾಪ್ತಿ ಮಾಡಿಕೊಳ್ಳಬಹುದು.


ಸದ್ಗುಣಗಳ ಮೂರ್ತಿ, ಗುಣಗಳ ಗಣಿ, ದಿವ್ಯ ಬುದ್ಧಿಯದಾತಾ, ಗಣೇಶನಾಗಿರುವುದರಿಂದ ಪ್ರತಿಯೊಂದು ಕಾರ್ಯವು ಸೂಸುತ್ರವಾಗಲು, ಪ್ರಾರಂಭದಲ್ಲಿ ಗಣೇಶನ ಪೂಜೆಯು ಮಾಡುವ ವಾಡಿಕೆ ಇದೆ. ಪೂಜೆಯ ಜೊತೆಗೆ ನಾವು ನಮ್ಮ ಜೀವನದಲ್ಲಿ ಗಣೇಶನ ವಿಶೇಷತೆಗಳನ್ನು ಧಾರಣೆ ಮಾಡಿದರೆ ನಮ್ಮ ಜೀವನ ಸಾರ್ಥಕವಾಗುವುದು. ಅದಕ್ಕೆ ಆತ್ಮ ಜ್ಞಾನದ ಅವಶ್ಯಕತೆ ಇದೆ. ಇಲ್ಲಿ ಗಣಪತಿ ವ್ಯಕ್ತಿವಾಚಕ ಶಬ್ದ ಅಲ್ಲ ಅದು ಗುಣವಾಚಕ ಶಬ್ದವಾಗಿದೆ. ಅತ್ಮವು ಶರೀರ ಬಿಟ್ಟು ಹೋದ ಮೇಲೆ, ಪಂಚ ತತ್ವಗಳಲ್ಲಿ ವಿಲೀನವಾಗುತ್ತದೆ. ನಮ್ಮ ಜೀವನವು ಗಣಪತಿಯ ಹಾಗೆ ನಾಲ್ಕು ದಿನಗಳ ಬಾಳಾಗಿದೆ. ಆದ್ದರಿಂದ ಈ ಅಲ್ಪ ಸಮಯದಲ್ಲಿ ಗಣೇಶನ ಗುಣಗಳನ್ನು ಧಾರಣೆ ಮಾಡಿ, ನಮ್ಮ ಬಾಳನ್ನು ಬಂಗಾರ ಮಾಡಿಕೊಳ್ಳೊಬೇಕು.


–ವಿಶ್ವಾಸ. ಸೋಹೋನಿ. ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್,

Bottom Add3
Bottom Ad 2

You cannot copy content of this page