Karnataka News

*ಪತಿಯ ಕತ್ತಿಗೆ ಚಾಕು ಇರಿದ ಪತ್ನಿ*

ಪ್ರಗತಿವಾಹಿನಿ ಸುದ್ದಿ: ನಿವೃತ್ತ ಡಿಜಿ-ಐಜಿಪಿ ಓಂ ಪ್ರಕಾಶ್ ಅವರನ್ನು ಅವರ ಪತ್ನಿ ಪಲ್ಲವಿಯೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತನಿಖೆ ನಡೆಯುತ್ತಿರುವಾಗಲೇ ಅದೇ ಮಾದರಲ್ಲಿಯಲ್ಲಿ ವಿಜಯಪುರದಲ್ಲಿ ಮಹಿಳೆಯೊಬ್ಬರು ತನ್ನ ಪತಿಯನ್ನು ಹತ್ಯೆ ಮಾಡಲು ಯತ್ನಿಸಿದ ಘಟನೆ ನಡೆದಿದೆ.

Home add -Advt

ಬಿದ್ಧಿವಾದ ಹೇಳಿದ್ದಕ್ಕೆ ಪತ್ನಿ ತನ್ನ ಪತಿಯ ಕತ್ತಿಗೆ ಚಾಕುವಿನಿಂದ ಇರಿದ್ದು, ಕೊಲೆಗೆ ಯತ್ನಿಸಿದ್ದಾಳೆ. ತೇಜು ಎಂಬ ಮಹಿಳೆ ತನ್ನ ಪತಿ ಅಜಿತ್ ರಾಠೋಡ್ ಗಾಢ ನಿದ್ರೆಗೆ ಜಾರಿದ್ದ ವೇಳೆ ಆತನನ್ನು ಹತ್ಯೆ ಮಾಡಲು ಯತ್ನಿಸಿ ಚಾಕು ಇರಿದಿದ್ದಾಳೆ. ಅಜಿತ್ ಜೋರಾಗಿ ಕಿರುಚಿಕೊಂಡಾಗ ಮನೆಯವರೆಲ್ಲ ಓಡಿಬಂದಿದ್ದಾರೆ. ಆಗ ವಿಷಯ ಗೊತ್ತಾಗಿದೆ.

ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ತೇಜು ಯಾವಾಗಲೂ ಮೊಬೈಲ್ ನಲ್ಲಿ ಚಾಟಿಂಗ್ ನಲ್ಲಿ ಬ್ಯುಸಿ ಇರುತ್ತಿದ್ದಳಂತೆ. ಅದಕ್ಕೆ ಪತಿ ಅಜಿತ್ ಬೈದು ಬುದ್ದಿ ಹೇಳಿದ್ದ ಎನ್ನಲಾಗಿದೆ. ಇದೇ ವಿಚಾರವಾಗಿ ಕೋಪಗೊಂಡು ತೇಜು ಪತಿಯನ್ನೇ ಮುಗಿಸಲು ಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಆದರ್ಶ ನಗರ ಠಾಣೆ ಪೊಲೀಸರು ಮಹಿಳೆ ತೇಜುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Articles

Back to top button