Kannada NewsKarnataka NewsLatestNational

*ದೆವ್ವ ಬಿಡಿಸುವುದಾಗಿ ಹೇಳಿ ಯುವತಿಯ ಮೇಲೆ ಅತ್ಯಾಚಾರ*

ಪ್ರಗತಿವಾಹಿನಿ ಸುದ್ದಿ; ಮಿರ್ಜಾಪುರ: ದೆವ್ವ ಬಿಡುಸುವುದಾಗಿ ಹೇಳಿ ವ್ಯಕ್ತಿಯೋರ್ವ ಯುವತಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ಉತರ ಪ್ರದೇಶದ ಬದೋಹಿಯಲ್ಲಿ ನಡೆದಿದೆ.

18 ವರ್ಷದ ಯುವತಿಯನ್ನು ನಂಬಿಸಿ ದೆವ್ವ, ದುಷ್ಟಶಕ್ತಿಯನ್ನು ಬಿಡಿಸುವುದಾಗಿ ಹೇಳಿ 52 ವರ್ಷದ ಮೋತಿಲಾಲ್ ಎಂಬ ವ್ಯಕ್ತಿ ಅತ್ಯಾಚಾರವೆಸಗಿದ್ದಾನೆ.

ತಾನು ತಾಂತ್ರಿಕ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಯುವತಿಯ ಕುಟುಂಬದವರೊಂದಿಗೆ ನಿಮ್ಮ ಮಗಳಿಗೆ ದೆವ್ವ ಹಿಡಿದಿದೆ. ಭೂತೋಚ್ಛಾಟನೆ ಮೂಲಕ ಆಕೆಯ ದೇಹದಲ್ಲಿದ್ದ ಭೂತವನ್ನು ಓಡಿಸಬಹುದು ಎಂದು ಹೇಳಿ ಕುಟುಂಬದವರನ್ನೂ ನಂಬಿಸಿದ್ದಾನೆ. ಹೀಗೆ ಹೇಳಿ ಯುವತಿಯ ಕುಟುಂಬದವರಿಂದ 4 ಸಾವಿರ ರೂಪಾಯಿ ಹಣ ಪಡೆದ ಆರೋಪಿ, ಯುವತಿಯನ್ನು ಬೈಕಿನಲ್ಲಿ ದರ್ವಸಿ ಗ್ರಾಮದ ದೇವಸ್ಥಾನದ ಬಳಿ ಕರೆದೊಯ್ದಿದ್ದಾನೆ.

ಗ್ರಾಮದ ದೇವಸ್ಥಾನದ ಹಿಂದಿನ ಕೋಣೆಗೆ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಮೂರು ಗಂಟೆ ಬಳಿಕ ಯುವತಿಯನ್ನು ಮತ್ತೆ ವಾಪಾಸ್ ಕರೆತಂದು ಬಿಟ್ಟಿದ್ದಾನೆ. ಬಳಿಕ ಮರುದಿನ ಮತ್ತೆ ತನ್ನನ್ನು ಭೇಟಿಯಾಗಲು ಹೇಳಿದ್ದಾನೆ. ಘಟನೆ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾನೆ. ಸಂತ್ರಸ್ತ ಯುವತಿ ದುರುಳನ ಕೃತ್ಯದ ಬಗ್ಗೆ ಪೋಷಕರಿಗೆ ತಿಳಿಸಿದ್ದಾಳೆ.

Home add -Advt

ಇದರಿಂದ ಆಘಾತಕ್ಕೊಳಗಾದ ಪೋಷಕರು ಮೋತಿಲಾಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button