ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ದೇವರ ಚಿತ್ರವಿರುವ ಸ್ಟ್ಯಾಂಪ್ ಗಳಿಗೆ ಡ್ರಗ್ಸ್ ಅಂಟಿಸಿ, ಕೇವಲ 20 ರೂಪಾಯಿಯ ಎನ್ವಲಪ್ ಕವರ್ ನಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.
ದೇವರನಾಡು ಎಂದೇ ಕರೆಯಲ್ಪಡುವ ಕೇರಳದಿಂದ ದೇವರ ಹೆಸರಿನಲ್ಲಿ ಈ ಡ್ರಗ್ಸ್ ಪೂರೈಕೆಯಾಗುತ್ತಿದೆ.
ಕೊರಿಯರ್ ಮೂಲಕ ಈ ಸ್ಟ್ಯಾಂಪ್ ಆನೆಕಲ್ ನ ಹೆಬ್ಬಗೋಡಿ ಬಳಿಯ ಸ್ಪರ್ಶ್ ಮತ್ತು ಹೆಲ್ತ್ ಸಿಟಿಯಲ್ಲಿನ ಎಕ್ಸ್ ರೇ ಟೆಕ್ನಿಷಿಯನ್ ಅರುಣ್ ಎಂಬಾತನಿಗೆ ಕಳುಹಿಸಲಾಗುತ್ತಿತ್ತು. ಕೊಟ್ಟಾಯಂ ನಿಂದ ಗಣೇಶ್ ಎಂಬಾತ ಈ ಕೊರಿಯರ್ ಕಳುಹಿಸುತ್ತಿದ್ದ ಕಳೆದ ನಲಕು ತಿಂಗಳಿಂದ ಆರೋಪಿಗಳಿಗಾಗಿ ಬಲೆ ಬೀಸಿದ್ದ ಪೊಲೀಸರು ಇದೀಗ ಹಲವರನ್ನು ಬಂಧಿಸಿದ್ದಾರೆ.
ದೇವರ ಚಿತ್ರವಿರುವ 400ಕ್ಕೂ ಹೆಚ್ಚು ಸ್ಟ್ಯಾಂಪ್ ಸಿಕ್ಕಿದ್ದು, 15 ಲಕ್ಷ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ