Belagavi NewsBelgaum NewsCrimeKannada NewsKarnataka NewsNationalPolitics

*ಗೋಕಾಕ ಪೊಲೀಸರಿಂದ ಅಂತರ ರಾಜ್ಯ ಬೈಕ್ ಕಳ್ಳನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿವಿಧ ಕಡೆ ಬೈಕ್ ಕಳ್ಳತನ ಮಾಡುತ್ತಿದ್ದ ಅಂತರ ರಾಜ್ಯ ಬೈಕ್ ಕಳ್ಳನನ್ನು ಬೆಳಗಾವಿ ಪೊಲೀಸರು ಬಂಧಿಸಿ ಲಕ್ಷಾಂತರ ಮೌಲ್ಯದ ಬೈಕ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ರಮೇಶ ಮನೋಹರ ಸುತಾರ (36) ಬಂಧಿತ ಆರೋಪಿ.‌ ಬೈಕ್ ಕಳ್ಳತನ ಪ್ರಕರಣದಲ್ಲಿ ಆರೋಪಿಗೆ ವಿಚಾರಣೆಗೆ ಒಳಪಡಿಸಿದಾಗ ಗೋಕಾಕ ಶಹರದಲ್ಲಿ ಕಳುವು ಮಾಡಿದ 2 ಬೈಕ್ ಕಳ್ಳತನ ಪ್ರಕರಣ ಹಾಗೂ ಬೆಳಗಾವಿಯ ಸಾಂಬ್ರಾ, ಸಂಕೇಶ್ವರ, ಗಂಡಹಿಂಗ್ಲಜ ಪೊಲೀಸ್ ಠಾಣೆಯ ವ್ಯಾಪ್ತಿಗಳಲ್ಲಿ ಕಳವು ಮಾಡಿದ 5 ಬೈಕ್ ಹೀಗೆ ಒಟ್ಟು 7 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.

ಇವುಗಳ ಮೊತ್ತ 3,84,000 ರೂ. ಎಂದು ಅಂದಾಜಿಸಲಾಗಿದೆ.‌ ವಶಕ್ಕೆ ಪಡೆದ ಬೈಕ್ ಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಹಾಗೂ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.

ಈ ಪ್ರಕರಣದಲ್ಲಿ ಕಳ್ಳರನ್ನು ಪತ್ತೆ ಮಾಡಿ ಬಂದಿಸುವಲ್ಲಿ ಯಶಸ್ವಿಯಾದ ಗೋಕಾಕ ಶಹರ ಪೊಲೀಸ್ ಠಾಣೆಯ ಸಿಪಿಐ ಸುರೇಶಬಾಬು ಆರ್ ಬಿ, ಪಿ ಎಸ್ ಐ. ಕಿರಣ ಮೋಹಿತೆ, ಪ್ರೋ.ಪಿ.ಎಸ್.ಐ  ಗೌರಿಶಂಕರ ಹಾಗೂ ಸಿಬ್ಬಂದಿ ಜನರಾದ ಎಎಸ್ಐ ಆರ್.ಬಿ.ಹಡಪದ, ಕೆ.ಎನ್.ಇಳಿಗೇರ, ಬಿ.ಎಸ್.ಸಿದ್ದಾಳ, ಜೆ.ಎಚ್ ಗುಡ್ಲಿ, ಎಸ್.ಎಲ್.ಮಂಗಿ, ಮಂಜು ಹುಚಗೌಡರ, ಐ.ವಿ.ಘಂಟಿ, ಮಂಜುನಾಥ ನಾಯಿಕ ಹಾಗೂ ಬೆಳಗಾವಿಯ ಟೆಕ್ನಿಕಲ್ ಸೆಲ್ ಸಿಬ್ಬಂದಿಯಾದ ಸಚೀನ ಪಾಟೀಲ್ ಇವರ ಕಾರ್ಯವನ್ನು ಬೆಳಗಾವಿ ಎಸ್.ಪಿ ಶ್ಲಾಘಿಸಿದ್ದಾರೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button