Belagavi NewsBelgaum NewsCrimeKannada NewsKarnataka NewsNationalPolitics

*ಬೆಳಗಾವಿ ನ್ಯಾಯಾಲದ ಮುಂದೆ ಮಾಧ್ಯಮಗಳ ಮೇಲೆ ಹಲ್ಲೆ: ನಾಲ್ವರ ವಿರುದ್ಧ ಎಫ್ಐಆರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪು ಬಂದ ಬೆನ್ನಲ್ಲೇ ಆರೋಪಿಗಳನ್ನು ನ್ಯಾಯಾಲಯದಿಂದ ವಾಪಸ್ ಕರೆದುಕೊಂಡು ಹೋಗುವ ವೇಳೆ ಆರೋಪಿಗಳ ದೃಶ್ಯ ಸೆರೆಹಿಡಿಯಲು ಮುಂದಾದ ಟಿವಿ ಕ್ಯಾಮೆರಾಮನ್‌ಗಳ ಮೇಲೆ ಆರೋಪಿಗಳು ದರ್ಪ ಮೆರೆದ ಘಟನೆ ಮಾಧ್ಯಮ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸದ್ಯ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿವಿಧ ಪ್ರಕರಣದ ಆರೋಪಿಗಳಾದ ಮುತ್ಯಾನಟ್ಟಿ ಮೂಲದ ಬಸವರಾಜ ದಡ್ಡಿ, ಬಸವಣ್ಣಿ ನಾಯಕ್, ನವೀನ್ ದಡ್ಡಿ ಹಾಗೂ ಲಕ್ಷ್ಮೀಣ ದಡ್ಡಿ ವಿರುದ್ಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Home add -Advt

ಘಟನೆಯ ಹಿನ್ನೆಲೆ:

ಪ್ರಕರಣದಲ್ಲಿ ದಡ್ಡಿ ವಿರುದ್ಧ ದೋಷ ಸಾಬೀತಾಗಿದೆ ಎಂಬ ಮಾಹಿತಿ ಹೊರಬಿದ್ದ ತಕ್ಷಣವೇ, ನ್ಯಾಯಾಲಯ ಆವರಣದ ವಾತಾವರಣ ಉದ್ವಿಗ್ನಗೊಂಡಿತು. ಇದೇ ವೇಳೆ ದೃಶ್ಯ ಚಿತ್ರೀಕರಿಸುತ್ತಿದ್ದ ಕ್ಯಾಮೆರಾಮನ್‌ಗಳತ್ತ ಮುಖ ಮಾಡಿದ್ದ ಆರೋಪಿಗಳು, ಕ್ಯಾಮೆರಾವನ್ನು ತಳ್ಳಿಹಾಕಲು ಹಲ್ಲೆಗೆ ಯತ್ನಿಸಿದರು.‌ ಈ ವೇಳೆ ಬೆಳಗಾವಿಯ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ದೋಷಿಗಳ ದರ್ಪ ಸಿಡಿದ ಘಟನೆಯಿಂದ ಬುಧವಾರ ಸಂಜೆ ಆತಂಕ ಮೂಡಿಸಿತು.

ಅಷ್ಟೇ ಅಲ್ಲ, ಕರ್ತವ್ಯ ನಿರ್ವಹಿಸುತ್ತಿದ್ದ ಮಾಧ್ಯಮ ಪ್ರತಿನಿಧಿಗಳ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದನೆ ನಡೆದಿತ್ತು.‌ ಶಿಕ್ಷೆಗೆ ಒಳಗಾದ ಆರೋಪಿಗಳನ್ನು ಪೊಲೀಸ್‌ ಭದ್ರತೆಯಲ್ಲಿ ಕರೆದೊಯ್ಯುವ ಸಂದರ್ಭದಲ್ಲೇ ಇಂತಹ ಅಸಭ್ಯ ವರ್ತನೆ ನಡೆದಿದನ್ನು ಬೆಳಗಾವಿಯ ಸಮಸ್ತ ಮಾಧ್ಯಮ ಬಳಗ ಖಂಡಿಸುತ್ತಿದ್ದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Related Articles

Back to top button