Latest

*ತೀವ್ರ ಇಳಿಕೆ ಕಂಡ ಚಿನ್ನ: ಇಂದಿನ ಬೆಲೆ ಎಷ್ಟಿದೆ ಗೋತ್ತಾ..?*

ಪ್ರಗತಿವಾಹಿನಿ ಸುದ್ದಿ: ಜುಲೈ 28  ಅಂದರೆ ಇಂದಿಗೆ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 63,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 68,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,450 ರುಪಾಯಿ ಇದೆ. 

ಚಿನ್ನದ ಬೆಲೆ ಕುಸಿಯುವುದು ಮುಂದುವರಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಅಗ್ಗವಾಗುತ್ತಿದೆ. ನಾಲ್ಕು ತಿಂಗಳ ಹಿಂದಿದ್ದ ಮಟ್ಟಕ್ಕೆ ಬೆಲೆ ಇಳಿದಿದೆ. ಮಾರ್ಚ್ 29ಕ್ಕೆ 22 ಗ್ರಾಮ್ ಚಿನ್ನದ ಬೆಲೆ 6,300 ರೂ ಇತ್ತು. ಇವತ್ತೂ ಕೂಡ ಅದೇ ಬೆಲೆಗೆ ಇಳಿದಿದೆ. ಬಜೆಟ್ ಪೂರ್ವದಿಂದಲೇ ಚಿನ್ನದ ಬೆಲೆ ಇಳಿಯಲು ಆರಂಭಿಸಿತಾದರೂ ಬಜೆಟ್​ನಲ್ಲಿ ಚಿನ್ನ, ಬೆಳ್ಳಿ ಮೇಲಿನ ಆಮದು ಸುಂಕ ಇಳಿಸಿದ ಬಳಿಕ ತೀವ್ರ ಮಟ್ಟದಲ್ಲಿ ಭಾರತದಲ್ಲಿ ಬೆಲೆ ಕುಸಿದಿದೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 63,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,425 ರುಪಾಯಿಯಲ್ಲಿ ಇದೆ. 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 68,730 ರೂ ಹಾಗೂ ಬೆಳ್ಳಿ ಬೆಲೆ 10 ಗ್ರಾಂಗೆ: 842.50 ಇದೆ. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button