
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ವಿದ್ಯಮಾನಗಳು ಗರಿಗೆದರಿದ್ದು, ಮುಂದಿನ ಸಿಎಂ ಆಯ್ಕೆ ಸಂಬಂಧ ಇಂದು ಸಂಜೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ.
ನೂತನ ಸಿಎಂ ಆಯ್ಕೆ ನಿಟ್ಟಿನಲ್ಲಿ ಬಿಜೆಪಿ ವೀಕ್ಷಕರಾಗಿ ಕಿಶನ್ ರೆಡ್ದಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಧರ್ಮೇಂದ್ರ ಪ್ರಧಾನ್ ಕೂಡ ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಇಂದು ಸಂಜೆ ಖಾಸಗಿ ಹೋಟೆಲ್ ನಲ್ಲಿ ಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಸಭೆಯಲ್ಲಿ ವೀಕ್ಷಕರು ಕೂಡ ಭಾಗವಹಿಸಲಿದ್ದಾರೆ. ಸಭೆಯಲ್ಲಿ ಇಂದೇ ನೂತನ ಮುಖ್ಯಮಂತ್ರಿ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.
ಈಗಾಗಲೇ ಮುಖ್ಯಮಂತ್ರಿ ರೇಸ್ ನಲ್ಲಿ 4-5 ಜನರ ಹೆಸರು ಕೇಳಿಬಂದಿದ್ದು, ಯಾರಾಗಲಿದ್ದಾರೆ ರಾಜ್ಯದ ನೂತನ ಸಿಎಂ ಎಂಬ ಕುತೂಹಲ ಮೂಡಿದೆ.
ಶಿಕ್ಷಕರ ವರ್ಗಾವಣೆ: ಲಂಚ ಪಡೆಯಲು ಹೋಗಿ ಎಸಿಬಿ ಬಲೆಗೆ ಬಿದ್ದ ಬಿಇಒ ಆಫೀಸ್ ಮ್ಯಾನೇಜರ್