Kannada NewsKarnataka News
ಸಫಾಯಿ ಕರ್ಮಚಾರಿಗಳಿಗೆ ಆರ್ ಎಸ್ಎಸ್ ನಿಂದ ಮಾಸ್ಕ್ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಬೆಳಗಾವಿಯಲ್ಲಿ ಶನಿವಾರ ಪೌರ ಕಾರ್ಮಿಕರಿಗೆ ಮಾಸ್ಕ್ ಗಳನ್ನು ವಿತರಿಸಿ, ಅವರ ಸೇವೆಯನ್ನು ಪ್ರಶಂಸಿಸಲಾಯಿತು.
ಆಜಂ ನಗರದ ಪಿಕಿ ಕ್ವಾಟರ್ಸ್ ನಲ್ಲಿರುವ ಸಫಾಯಿ ಕರ್ಮಚಾರಿಗಳಿಗೆ ಆರ್ ಎಸ್ ಎಸ್ ಸೇವಾ ವಿಭಾಗದಿಂದ ಅವರಿದ್ದಲ್ಲಿಗೇ ತೆರಳಿ ಮಾಸ್ಕ್ ವಿತರಿಸಲಾಯಿತು. ಪರಮೇಶ್ವರ ಹೆಗಡೆ, ಅಶೋಕ ಶಿಂತ್ರೆ, ವಿಶಾಲ ಖಾಂಡಗಾಳೆ ಮತ್ತು ಪಾಲ್ಕೆಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.




