Kannada NewsKarnataka NewsLatest
ಗ್ರಾಮ ಪಂಚಾಯಿತಿ ಸದಸ್ಯರಿಗೆ ಸನ್ಮಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶ್ರೀ ವಿರಾಟ್ ವಿಶ್ವಕರ್ಮ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆ (ರಿ) ಶಹಾಪೂರ, ಬೆಳಗಾವಿ ವತಿಯಿಂದ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ವಿಶ್ವಕರ್ಮ ಸಮಾಜದ ಅಭ್ಯರ್ಥಿಗಳನ್ನು ಸತ್ಕರಿಸಲಾಯಿತು.
ರೂಪಾ ಸುತಾರ, ಹಲಗಾ ಗ್ರಾ.ಪಂ, ಪ್ರದೀಪ ಸುತಾರ & ಸುನೀಲ ಅರಳಿಕಟ್ಟಿ, ಯಳ್ಳೂರು ಗ್ರಾ.ಪಂ, ರಾಜು ಬಡಿಗೇರ ಧಾಮಣೆ ಗ್ರಾ.ಪಂ ಇವರುಗಳಿಗೆ ಸತ್ಕಾರ ಸಮಾರಂಭವನ್ನು ಶಹಾಪುರದ ಗಣೇಶ ಗಲ್ಲಿಯ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಮಾರಂಭದಲ್ಲಿ ಶ್ರೀ ಕಾಳಿಕಾ ದೇವಸ್ಥಾನ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಜನಾರ್ಧನ ಬಡಿಗೇರ, ಉಪಾಧ್ಯಕ್ಷ ಕಾಳೇಶ ಪತ್ತಾರ, ಬಿಜೆಪಿ ಬೆಳಗಾವಿ ದಕ್ಷಿಣದ ಅಧ್ಯಕ್ಷರಾದ ಗೀತಾ ಸುತಾರ, ಸಂಸ್ಥೆಯ ಅಧ್ಯಕ್ಷರಾದ, ಪೂರ್ಣಿಮಾ ಪತ್ತಾರ, ಉಪಾಧ್ಯಕ್ಷರಾದ ಪ್ರೇಮಾ ಹಾವನೂರ, ಖಜಾಂಚಿ ರಾಜಶ್ರೀ ಬಡಿಗೇರ, ಸದಸ್ಯರಾದ ಪ್ರಭಾ ಪತ್ತಾರ, ಆರತಿ ಹಾವನೂರ, ಸ್ನೇಹಾ ಸಾಲಿ ಇವರು ಉಪಸ್ಥಿತರಿದ್ದರು.




