Latest

ಅವನೇನು ಕತ್ತೆ ಕಾಯುತ್ತಿದ್ನಾ? HDK ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಜೆಡಿಎಸ್ ಶಾಸಕ

ಪ್ರಗತಿವಾಹಿನಿ ಸುದ್ದಿ; ತುಮಕೂರು: ರಾಜ್ಯಸಭೆ ಚುನಾವಣೆಯಲ್ಲಿ ತಮ್ಮದೇ ಪಕ್ಷದ ಶಾಸಕ ಗುಬ್ಬಿ ಶ್ರೀನಿವಾಸ್ ಯಾರಿಗೂ ಮತಹಾಕದೇ ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಕೆಂಡಾಮಂಡಲವಾಗಿರುವ ಶಾಸಕ ಶ್ರೀನಿವಾಸ್, ಅವನೇನು ಕತ್ತೆ ಕಾಯುತ್ತಿದ್ನಾ? ಬ್ಯಾಲೆಟ್ ಪೇಪರ್ ತೋರಿಸಿ ಮತಹಾಕಿದ್ದೇನೆ. ಆಗ ಏನುಮಾಡುತ್ತಿದ್ದ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಮತದಾನದ ವೇಳೆ ಮೂರ್ನಾಲ್ಕು ನಿಮಿಷ ಪೇಪರ್ ಹಿಡಿದು ತೋರಿಸಿದ್ದೇನೆ. ನಂತರ ಹೋಗಿ ವೋಟ್ ಹಾಕಿದ್ದೇನೆ. ಅನುಮಾನವಿದ್ದರೆ ಹೆಬ್ಬಟ್ಟು ತೆಗಿ ಅಂತ ಹೇಳಬೇಕಿತ್ತು. ಅವನೇನು ಕತ್ತೆ ಕಾಯುತ್ತಿದ್ನಾ? ಆಗ ಸುಮ್ಮನಿದ್ದು ಈಗ ಇಲ್ಲದ ಆರೋಪ ಮಾಡುತ್ತಿದ್ದಾನೆ ಎಂದು ಕಿಡಿಕಾರಿದ್ದಾರೆ.

Home add -Advt

ನನ್ನನ್ನು ಪಕ್ಷದಿಂದ ಹೊರಹಾಕಲು ಈ ರೀತಿ ಮಾಡುತ್ತಿದ್ದಾರೆ. ಕುಮಾರಸ್ವಾಮಿ ದೊಡ್ಡ ಊಸರವಳ್ಳಿ ಇದ್ದಂತೆ. ತನಗೆ ಬೇಕಾದಂತೆ ಕ್ಷಣಕ್ಕೊಂದು ಬಣ್ಣ ಬದಲಾಯಿಸ್ತಾನೆ. ಬೆಳಿಗ್ಗೆ ಒಂದು ಸಂಜೆ ಮತ್ತೊಂದು ಮಾತಾಡ್ತಾನೆ. ಕುಮಾರಸ್ವಾಮಿ ಯಾವುದರಲ್ಲಿಯೂ ಶುದ್ಧವಿಲ್ಲ, ಕಚ್ಚೆ ಸರಿಯಿಲ್ಲ, ಬಾಯಿ ಸರಿಯಿಲ್ಲ, ನಾವು ಒಳ್ಳೆ ಕಾರಲ್ಲಿ ಓಡಾಡಿದರೆ, ಒಳ್ಳೆ ಬಟ್ಟೆ ಹಾಕಿದರೆ ಹೆಚ್.ಡಿ.ಕೆಗೆ ಸಿಟ್ಟು ಬರುತ್ತೆ. ಪಕೀರರು, ಪೇಪರ್ ಆಯೋರು ಇದ್ದಂತೆ ಇರಬೇಕು ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

Related Articles

Back to top button