Latest

*ಅಕಾಲಿಕ ಮಳೆ: 14 ಜನರು ಸಾವು*

ಪ್ರಗತಿವಾಹಿನಿ ಸುದ್ದಿ: ವಿವಿಧ ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗುತ್ತಿದ್ದು, ಅದರಲ್ಲಿಯೂ ಗುಜರಾತ್ ನಲ್ಲಿ ವರುಣಾರ್ಭಟಕ್ಕೆ 14 ಜನರು ಮೃತಪಟ್ಟಿದ್ದಾರೆ.

ಕಳೆದ 24ಗಂಟೆಗಳಲ್ಲಿ ಗುಜರಾತ್ ನ 253 ತಾಲೂಕುಗಳ ಪೈಕಿ 168 ತಾಲೂಕುಗಳಲ್ಲಿ ಅಕಾಲಿಕ ಮಳೆಯಾಗಿದೆ. ಖೇಡಾ, ಗಾಂಧಿನಗರ, ಮೆಹ್ಸಾನಾ, ವಡೋದರಾ ಜಿಲ್ಲೆಗಳಲ್ಲಿ 25ರಿಂದ 40 ಮಿ.ಮೀ ಮಳೆಯಾಗಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರ ತಿಳಿಸಿದೆ.

ಹಲವು ಜಿಲ್ಲೆಗಾಲ್ಲಿ ಬಿರುಗಾಳಿ ಹೊಡೆತಕ್ಕೆ ಮರಗಳು ಧರಾಶಾಹಿಯಾಗಿದ್ದು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮನೆಗಳು ಕುಸಿದುಬಿದ್ದಿವೆ. ಮಳೆ ಸಮ್ಬಂಧಿತ ಅವಾಂತರದಲ್ಲಿ ಈವರೆಗೆ ರಾಜ್ಯದಲ್ಲಿ 14 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಕೆಲ ದಿನಗಳವರೆಗೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಮುಂದುವರೆಯಲಿದೆ. ಗಾಳಿಯು ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Related Articles

Back to top button