
ಪ್ರಗತಿವಾಹಿನಿ ಸುದ್ದಿ: ಎಂಎಲ್ ಸಿ ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ ಮಾಡಿ ಯುವಕನೊಬ್ಬ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಬೆಂಗಳೂರಿನ ಕೆಂಪೇಗೌಡ ಏರ್ ಪೋರ್ಟ್ ಬಳಿ ಸುದ್ದಿಗಾರರು ಸೂರಜ್ ರೇವಣ್ಣ ವಿರುದ್ಧದ ಆರೋಪದ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಕೆಂಡಕಾರಿದ ಕುಮಾರಸ್ವಾಮಿ, ಈ ವಿಚಾರ ನನ್ನ ಬಳಿ ಚರ್ಚೆ ಬೇಡ ಎಂದು ಗರಂ ಆದರು.
ರಾಜ್ಯಕ್ಕೆ ಸಂಬಂಧಪಟ್ಟ ವಿಚಾರಗಳು ಮಾತ್ರ ನನ್ನ ಬಳಿ ಚರ್ಚೆ ಮಾಡಿ. ಅದನ್ನು ಬಿಟ್ಟು ಬೇರೆ ಚರ್ಚೆ ಅಗತ್ಯವಿಲ್ಲ. ಸೂರಜ್ ವಿರುದ್ಧ ಆರೋಪದ ಬಗೆಗೆ ಚರ್ಚೆ ನನಗೆ ಅವಶ್ಯಕತೆ ಇಲ್ಲ. ಕಾನೂನು ಇದೆ ನೋಡಿಕೊಳ್ಳುತ್ತದೆ. ಯಾಕೆ ದೂರುಗಳು ಆಗಿವೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದು ಕಿಡಿಕಾರಿದರು.