ಪ್ರಗತಿವಾಹಿನಿ ಸುದ್ದಿ; ಕಲಬುರ್ಗಿ: ಪುಟಗೋಸಿ ವಿಪಕ್ಷ ನಾಯಕನ ಹುದ್ದೆಗಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನೇ ಉರುಳಿಸಿದರು ಎಂಬ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಕಿಡಿಕಾರಿರುವ ಸಿದ್ದರಾಮಯ್ಯ ಸಂವಿಧಾನಿಕವಾಗಿರುವ ಹುದ್ದೆ ಬಗ್ಗೆ ಮಾಜಿ ಸಿಎಂ ಆಗಿ ಇಂಥ ಹೇಳಿಕೆ ನೀಡುವುದು ಸರಿಯಲ್ಲ ಎಂದು ಗುಡುಗಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ವಿಪಕ್ಷ ನಾಯಕನ ಹುದ್ದೆ ಎಂದರೆ ಕುಮಾರಸ್ವಾಮಿಗೆ ಪುಟಗೋಸಿನಾ? ಹಾಗಾದರೆ ಹೆಚ್.ಡಿ.ದೇವೇಗೌಡರು ಕೂಡ ವಿರೋಧ ಪಕ್ಷದ ನಾಯಕನ ಹುದ್ದೆ ಅಲಂಕರಿಸಿದ್ದರು. ಅದು ಕೂಡ ಪುಟಗೋಸಿಯೇ? ಸಂವಿಧಾನಿಕ ಹುದ್ದೆ ಬಗ್ಗೆ ಕುಮಾರಸ್ವಾಮಿ ಈ ರೀತಿ ಅವಮಾನ ಮಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿಯೇ ಕಾರಣ. ನನಗೆ ಮೈತ್ರಿ ಸರ್ಕಾರ ಬೀಳಿಸಬೇಕು ಎನ್ನುವುದಿದ್ದರೆ ನಾನು ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ಒಪ್ಪುತ್ತಿರಲಿಲ್ಲ. ಸಿಎಂ ಆದವರು ಹೋಟೆಲ್ ನಲ್ಲಿ ಕುಳಿತು ಆಡಳಿತ ನಡೆಸುತ್ತಾರಾ? ಶಾಸಕರಿಗೆ ಸಿಎಂ ಭೇಟಿಯೂ ಸಾಧ್ಯವಾಗುತ್ತಿರಲಿಲ್ಲ, ಅವರ ಸಮಸ್ಯೆಗಳನ್ನೂ ಆಲಿಸುತ್ತಿರಲಿಲ್ಲ. ಮೈತ್ರಿ ಸರ್ಕಾರ ಪತನಕ್ಕೆ ಕುಮಾರಸ್ವಾಮಿನೇ ಕಾರಣ.
23 ಶಾಸಕರು ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿಲ್ಲ, ನಮ್ಮ ಪಕ್ಷದ 14 ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಮೂವರು ಜೆಡಿಎಸ್ ಶಾಸಕರು ಬಿಜೆಪಿಗೆ ಹೋಗಿದ್ದಾರೆ. ಹಾಗಾದರೆ ಜೆಡಿಎಸ್ ಶಾಸಕರನ್ನೂ ನಾನೇ ಬಿಜೆಪಿಗೆ ಕಳುಹಿಸಿದ್ನಾ? ಅನಗತ್ಯವಾಗಿ ಕುಮಾರಸ್ವಾಮಿ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ರಾಜಕೀಯವಾಗಿ ನನ್ನ ಕಂಡರೆ ಭಯ ಅದಕ್ಕೆ ಟಾರ್ಗೆಟ್ ಮಾಡುತ್ತಿದ್ದಾರೆ. ಹೆಚ್ ಡಿ ಕೆ ಅವರೆ ನಿಮಗಿರುವುದು ಎಷ್ಟು ನಾಲಿಗೆ? ಬಾಯಿಗೆ ಬಂದಂತೆ ಸುಳ್ಳು ಆರೋಪ ಮಾಡುತ್ತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಸಚಿವ ಸ್ಥಾನಕ್ಕಾಗಿ ಕಸರತ್ತು; ರಮೇಶ್ ಜಾರಕಿಹೊಳಿ ಟೆಂಪಲ್ ರನ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ