Belagavi NewsBelgaum NewsKannada NewsKarnataka NewsTravel

*ಬೆಂಗಳೂರು- ಮುಂಬೈ ರೈಲಿಗೆ ಚಾಲನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಸಂಸದರಾದ ಜಗದೀಶ ಶೆಟ್ಟರ ಅವರಿಂದ SMVT ಬೆಂಗಳೂರು-ಲೋಕಮಾನ್ಯ ತಿಲಕ ಟರ್ಮಿನಸ್ ಮುಂಬೈ ರೈಲಿಗೆ ಚಾಲನೆ ನೀಡಲಾಯಿತು.

ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಇಂದು SMVT ಬೆಂಗಳೂರು – ಲೋಕಮಾನ್ಯ ತಿಲಕ ಟರ್ಮಿನಸ್ ರೈಲು ಸಂಖ್ಯೆ 16553/54 ರ ಚಾಲನಾ ಸಮಾರಂಭ ನಡೆಯಿತು.

Home add -Advt

ಸಮಾರಂಭದಲ್ಲಿ ಜಗದೀಶ್ ಶೆಟ್ಟರ ಅವರು ರೈಲಿಗೆ ಹಸಿರು ನಿಶಾನೆ ನೀಡುವ ಮೂಲಕ ಚಾಲನೆ ನೀಡಿದರು, ನಂತರ ಮಾತನಾಡಿ ಅವರು, ರೈಲು ಜನಸ್ನೇಹಿ ಸಂಪರ್ಕವಾಗಿದ್ದು, ಜನತೆ ಹೆಚ್ಚಿನ ರೈಲು ಪ್ರಯಾಣಕ್ಕೆ ಆದ್ಯತೆ ನೀಡಬೇಕು. ಕಳೆದ ಹಲವು ವರ್ಷಗಳಿಂದ ಭಾರತೀಯ ರೈಲ್ವೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.

ಬೆಳಗಾವಿ ಕಿತ್ತೂರು ಧಾರವಾಡ ನೂತನ ರೈಲು ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಅಡೆತಡೆ ನಿವಾರಣೆ ಆಗಬೇಕಾಗಿದೆ. ಈ ಕುರಿತು ಧಾರವಾಡ ಜಿಲ್ಲೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಗೆ ರಾಜ್ಯ ಸರಕಾರ  ಮುಂದಾಗಬೇಕು ಎಂದರು.

ಸಮಾರಂಭದಲ್ಲಿ ಉಪ ಮೇಯರ್ ಹನುಮಂತ ಕೊಂಗಲಿ, ಡಾ. ರವಿ ಪಾಟೀಲ, ಚಿದಾನಂದ ದೇಮಶೆಟ್ಟಿ, ಪ್ರೇಮಚಂದ್ರ ಸೇರಿದಂತೆ ಹಿರಿಯ ರೈಲ್ವೆ ಅಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.

Related Articles

Back to top button