Politics

*ಹರೀಶ್ ಪೂಂಜಾ ಬಂಧನಕ್ಕೆ ಕಾರಣವೇ ಇಲ್ಲ: ಸರ್ಕಾರದ ವಿರುದ್ಧ ಪಿ ರಾಜೀವ್ ಗರಂ*

ಪ್ರಗತಿವಾಹಿನಿ ಸುದ್ದಿ: ಹರೀಶ್ ಪೂಂಜಾ ಬಂಧನಕ್ಕೆ ಕಾರಣವೇ ಇಲ್ಲ. ಅವರೇನು ತಲೆಮರೆಸಿಕೊಂಡಿಲ್ಲ, ಸಾಕ್ಷಿ ನಾಶ ಮಾಡಿಲ್ಲ, ಕೇವಲ ರಾಜಕೀಯ ಕಾರಣಕ್ಕಾಗಿ ಅವರನ್ನು ಬಂಧಿಸಬೇಕೆಂದು ಈ ಸರ್ಕಾರ 70 ಪೊಲೀಸರನ್ನು ಬಳಸಿಕೊಂಡಿದೆ. ಶಾಸಕರ ಮಾತಿನಲ್ಲಿ ಯಾವುದೇ ಕ್ರಿಮಿನಲ್ ಉದ್ದೇಶ ಇರಲಿಲ್ಲ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಂಧಿಸಲು ಯತ್ನಿಸಿದ್ದ ವಿಚಾರವಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಘೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಡಿ ಸುಧಾಕರ್ ಮೇಲೆ ಅಟ್ರಾಸಿಟಿ ಕೇಸ್‌ ದಾಖಲಾದರೂ ಅರೆಸ್ಟ್‌ ಮಾಡಿಲ್ಲ. ಪೆನ್‌ಡ್ರೈವ್‌ ಹಂಚುವಲ್ಲಿ ಡಿಕೆಶಿ ಪಾತ್ರ ಇದೆ ಎಂದರೂ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ. ಈ ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌

ದೇಶ ಕಂಡ ಅಸಮರ್ಥ ಗೃಹಸಚಿವರಲ್ಲಿ ಜಿ.ಪರಮೇಶ್ವರ್ ಮೊದಲಿಗರು, ಈ ಹಿಂದೆ ಕೊಲೆ, ಸುಲಿಗೆ ದರೋಡೆಯಂತಹ ಘಟನೆ ನಡೆದಾಗ ಎಲ್ಲಾ ಪೊಲೀಸ್‌ ಠಾಣೆಗೆ ಸುತ್ತೋಲೆ ಹೋಗುತ್ತಿತ್ತು. ಆದರೆ ಹೊಸ ಸರ್ಕಾರ ಬಂದ ಮೇಲೆ ಒಂದೂ ಸುತ್ತೋಲೆ ಬಂದಿಲ್ಲ ಹೋಮ್‌ ಮಿನಿಸ್ಟರ್‌ ಸುತ್ತೋಲೆಗೆ ಸೂಚನೆಯೇ ಕೊಡುತ್ತಿಲ್ಲ.  ಮೊದಲು ಪರಮೇಶ್ವರ್‌ ಅವರನ್ನು ಸಂಪುಟದಿಂದ ವಜಾಗೊಳಿಸಿ ಎಂದು ಪಿ ರಾಜೀವ್ ಆಗ್ರಹಿಸಿದರು.

Home add -Advt

Related Articles

Back to top button