Kannada NewsKarnataka NewsLatest

*ಪಾರ್ಟಿ ಬಳಿಕ ಜಾಲಿ ರೈಡ್; ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಹುಟ್ಟುಹಬ್ಬದ ಭರ್ಜರಿ ಪಾರ್ಟಿ ಬಳಿಕ ಕಾರಿನಲ್ಲಿ ಜಾಲಿ ರೈಡ್ ಹೋಗಿದ್ದ ಯುವಕರು ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಮಡೆನೂರು ಫ್ಲೈ ಓವರ್ ಬಳಿ ನಡೆದಿದೆ.

ಎಲೆಕ್ಟ್ರಿಕ್ ಪೋಲ್ ಗೆ ಕಾರು ಡಿಕ್ಕಿ ಹೊಡೆದು ಪಕ್ಕದ ಜಮೀನಿನಲ್ಲಿ ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮುವರು ಗಂಭೀರವಾಗಿ ಗಾಯಗೊಂಡಿದ್ದಾರೆ.

Related Articles
Home add -Advt

ರಕ್ಷಿತ್ ಹಾಗೂ ಕುಶಾಲ್ ಮೃತ ದುರ್ದೈವಿಗಳು. ಅಭಿಷೇಕ್, ನಿಶಾಂತ್, ಮಂಜುನಾಥ್ ಗಂಭೀರವಾಗಿ ಗಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹುಟ್ಟುಹಬ್ಬ ಆಚರಣೆಗೆಂದು ಚನ್ನರಾಯಪಟ್ಟಣದ ಯುವಕರ ಗುಂಪು ಹಾಸನಕ್ಕೆ ಬಂದಿತ್ತು. ಗಿರೀಶ್ ಎಂಬುವವರಿಂದ ಕಾರು ಪಡೆದಿದ್ದ ಕುಶಾಲ್ ಎಂಬಾತ ಹುಟ್ಟುಹಬ್ಬದ ಸೆಲೆಬ್ರೇಷನ್ ಬಳಿಕ ಜಾಲಿ ರೈಡ್ ಹೋಗಿದ್ದಾರೆ. ಈ ವೇಳೆ ತಡ ರಾತ್ರಿ ಕಾರು ಎಲೆಕ್ಟ್ರಿಕ್ ಪೋಲ್ ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದಿದೆ. ದುರಂತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Related Articles

Back to top button