Latest

ನಿಶ್ಚಿತಾರ್ಥವಾಗುತ್ತಿದ್ದಂತೆ ಪ್ರಿಯತಮನೊಂದಿಗೆ ಸಾವಿಗೆ ಶರಣಾದ ಯುವತಿ

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಪ್ರೀತಿಗೆ ಅಡ್ಡಿಯಾಗಿ ಮನೆಯವರು ಬೇರೆ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ ಬೆನ್ನಲ್ಲೇ ಮನನೊಂದ ಯುವತಿ ತನ್ನ ಪ್ರಿಯತಮನೊಂದಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾವೇರಿ ಜಿಲ್ಲೆಯ ನಾಗನೂರು ಗ್ರಾಮದಲ್ಲಿ ನಡೆದಿದೆ.

ಇರ್ಷಾದ್ (23) ಹಾಗೂ ವಿದ್ಯಾಶ್ರೀ (22) ಮೃತ ದುರ್ದೈವಿಗಳು. ವಿದ್ಯಾಶ್ರೀ ಹಾಗೂ ಇರ್ಷಾದ್ ಪ್ರೀತಿಸುತ್ತಿದ್ದರು. ಆದರೆ ಇವರ ಪ್ರೀತಿಗೆ ಕುಟುಂಬದವರ ವಿರೋಧವಿತ್ತು. ಇದೇ ವೇಳೆ ಮನೆಯವರೆಲ್ಲ ಸೇರಿ ಬೇರೊಬ್ಬ ಯುವಕನೊಂದಿಗೆ ವಿದ್ಯಾಶ್ರೀ ನಿಶ್ಚಿತಾರ್ಥ ನೆರವೇರಿಸಿದ್ದರು.

Home add -Advt

ಇದರಿಂದ ಬೇಸರಗೊಂಡ ಯುವತಿ ನಿಶ್ಚಿತಾರ್ಥ ಮುಗಿದ ಬೆನ್ನಲ್ಲೇ ಇರ್ಷಾದ್ ಜೊತೆ ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿದ್ದಾಳೆ ಎಂದು ಕುಟುಂಬಸ್ಥರು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೀಗ ಇರ್ಷಾದ್ ಹಾಗೂ ವಿದ್ಯಾಶ್ರೀ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದು, ಇರ್ಷಾದ್ ಜಮೀನಿನಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ.
ಕರ್ಫ್ಯೂ ಮುಂದುವರಿಕೆ ಬಗ್ಗೆ ಗೃಹ ಸಚಿವರ ಸ್ಪಷ್ಟನೆ

Related Articles

Back to top button