ಪ್ರಗತಿವಾಹಿನಿ ಸುದ್ದಿ, ಮಧ್ಯಪ್ರದೇಶ – ೩೨ ವರ್ಷದ ಮಧ್ಯಪ್ರದೇಶದ ವ್ಯಕ್ತಿಯೊಬ್ಬ ಇಂಟರ್‌ನೆಟ್‌ನಲ್ಲಿ ಬಾಂಬ್ ತಯಾರಿಸುವುದನ್ನು ಕಲಿತು ಓರ್ವನನ್ನು ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ರತ್ಲಮ್‌ನಲ್ಲಿ ನಡೆದಿದೆ.
ವ್ಯಕ್ತಿಯ ಪತ್ನಿಯನ್ನು ದುಷ್ಕರ್ಮಿಗಳು ಗ್ಯಾಂಗ್ ರೇಪ್ ಮಾಡಿದ್ದರು. ಇರಿಂದ ಕ್ರುದ್ಧನಾಗಿದ್ದ ಆತ ರೇಪ್ ಮಾಡಿದವರ ಮೇಲೆ ಸೇಡು ತೀರಿಸಿಕೊಳ್ಳಲು ಹೊಂಚುಹಾಕುತ್ತಿದ್ದ. ಗ್ಯಾಂಗ್ ರೇಪ್‌ನಲ್ಲಿ ಪಾಲ್ಗೊಂಡ ಓರ್ವ ಆರೋಪಿಯನ್ನು ಬಾಂಬ್ ಹಾಕಿ ಕೊಲೆ ಮಾಡುವ ಮೂಲಕ ಥೇಟ್ ಸಿನಿಮಾ ಶೈಲಿಯಲ್ಲಿ ಸೇಡು ತೀರಿಸಿಕೊಂಡಿದ್ದಾನೆ.
ಇಂಟರ್‌ನೆಟ್‌ನಲ್ಲಿ ಬಾಂಬ್ ತಯಾರಿಸುವುದ ಕಲಿತ
ಮಧ್ಯಮ ವರ್ಗದ ಈ ವ್ಯಕ್ತಿ ಆರೋಪಿಯನ್ನು ಕೊಲೆ ಮಾಡಲು ಬಳಸಿದ ತಂತ್ರ ಕುತೂಹಲಕಾರಿಯಾಗಿದೆ. ಇಂಟರ್‌ನೆಟ್ ಮೂಲಕ ಬಾಂಬ್ ತಯಾರಿಸುವುನ್ನು ಕಲಿತು ಬಳಿಕ ಬಾಂಬ್‌ಗೆ ಅಗತ್ಯಿವಿದ್ದ ಸಲಕರಣೆಗಳನ್ನು ಕಲೆಹಾಕಿದ್ದಾನೆ. ಇಂಟರ್‌ನೆಟ್ ಮೂಲಕವೇ ಬಾಂಬ್ ಸಲಕರಣೆಗಳ ಜೋಡಣೆ ಕಲಿತಿದ್ದಾನೆ. ಬಳಿಕ ತಾನೇ ತಯಾರಿಸಿದ ಬಾಂಬ್ ಹಾಕಿ ಓರ್ವ ಆರೋಪಿಯನ್ನು ಕೊಲೆ ಮಾಡಿದ್ದಾನೆ ಎಂದು ರತ್ಲಾಮ್ ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳಾದ ಭವರ್‌ಲಾಲ್ ಮತ್ತು ದಿನೇಶ್ ಎಂಬುವವರನ್ನು ಸಹ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ನಿರ್ಬಂಧ ಸಡಲಿಕೆ: ತಜ್ಞರ ಸಭೆ ನಂತರ ತೀರ್ಮಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ