Kannada NewsKarnataka NewsLatest
ಕಡತನ ಬಾಗೇವಾಡಿ ಗ್ರಾಮದಲ್ಲಿ ವಿದ್ಯುತ್ ಅವಘಡ

ಪ್ರಗತಿವಾಹಿನಿ ಸುದ್ದಿ, ಕಕ್ಕೇರಿ: ಖಾನಾಪುರ ತಾಲೂಕಿನ ಕಡತನಬಾಗೇವಾಡಿ ಗ್ರಾಮದ ಬಸಪ್ಪ ಮಹಾದೇವ ಕೋಲಕಾರ ಅವರ ಮನೆಯಲ್ಲಿ ಗುರುವಾರ ಯಾರೂ ಇಲ್ಲದ ಸಮಯದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ.
ಅವರ ಮನೆ ಬಳಕೆಯ ವಸ್ತುಗಳಾದ ಹಾಸಿಗೆ, ಹೊದಿಕೆ, ಪಲ್ಲಂಗಗಳು, ಉಡುಪುಗಳು, ಒಕ್ಕಲುತನ ಸಲಕರಣೆಗಳಾದ ರೆಂಟೆ ಕುಂಟೆ, ಮಲ್ಚಿಂಗ್ ಪ್ಲಾಸ್ಟಿಕ್ ಪೇಪರ್ ಬಂಡಲ್ ಗಳು ಮುಂತಾದ ವಸ್ತುಗಳು, ೩೦ ಸಾವಿರ ರೂ. ನಗದು ಹಣ ಸುಟ್ಟು ಕರಕಲಾಗಿ ಆ ಕುಟುಂಬ ಬೀದಿಗೆ ಬಿದ್ದಿದೆ.
ಅದೃಷ್ಟ ವಶಾತ್ ಯಾವುದೇ ಜೀವ ಹಾನಿ ಆಗಿಲ್ಲ. ಅಕ್ಕ-ಪಕ್ಕದ ಜನರು ನೀರು -ಮಣ್ಣು ಹಾಕಿ ಬೆಂಕಿ ನಂದಿಸುವ ಯತ್ನ ಮಾಡಿದ್ದಾರೆ. ನಂದಗಡ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



