Belagavi NewsBelgaum NewsKannada NewsKarnataka News

*ರೈತ ಭವನದ ಬಳಿ ಹೆರಾಯಿನ್ ವಶ: ಓರ್ವನ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರ್ಕೆಟ್ ಯಾರ್ಡ ರೈತ ಭವನದ ಎದುರಿನ ರಸ್ತೆಯ ಪಕ್ಕದಲ್ಲಿ ಹೆರಾಯಿನ್ ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.

ನಾಗೇಶ್ ಮಧುಕರ್ ಭಗತ್ (ಸಾ. ಸಾವಂತವಾಡಿ ಹಾಲಿ ಮಹಾದೇವ ರೋಡ್ ಕಂಗ್ರಾಳಿ ಕೆಎಚ್) ಈತನು ಅನಧಿಕೃತವಾಗಿ ಹೆರಾಯಿನ್ ಮಾದಕ ವಸ್ತುವನ್ನು ಮಾರಾಟ ಮಾಡಲು ಬಂದ ವೇಳೆಯಲ್ಲಿ ಸಿಸಿಬಿ ಇನಸ್ಪೆಕ್ಟರ್ ನಂದಿಶ್ವರ್ ಕುಂಬಾರ್ ನೇತೃತ್ವದಲ್ಲಿ ಎಸ್ ಐ ಎಸ್ ಸಿ ಕೋರೆ, ಸಿಬ್ಬಂದಿಗಳಾದ ಜಿ ಆರ್ ಶಿರಸಂಗಿ, ಎಂ ಎಂ ಒಡೆಯರ್, ಎಸ್ ಬಿ ಪಾಟೀಲ್, ಪಿಸಿ ಎಎನ್ ರಾಮಗೂನಟ್ಟಿ ಹಾಗೂ ಮಹೇಶ್ ಪಾಟೀಲ್, ದಾಳಿ ನಡೆಸಿದರು.

Home add -Advt

ಆರೋಪಿತನಿಂದ 32,700 ರೂ. ಮೌಲ್ಯದ 1,102 ಗ್ರಾಂ. ಹೇರಾಯಿನ್ ಹಾಗೂ 40 ಸಾವಿರ ರೂ.ಮೌಲ್ಯದ ಒಂದು ಡೆನ್ಸಿಟಿ ಗಾಡಿಗಳನ್ನು ಜಪ್ತಿ ಮಾಡಿ ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button