Politics

*ಹನಿಟ್ರ್ಯಾಪ್ ಬಗ್ಗೆ ಉನ್ನತ ಮಟ್ಟದ ತನಿಖೆ: ಗೃಹ ಸಚಿವ ಡಾ.ಜಿ.ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ : ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಸದ್ದು ಮಾಡುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಭರವಸೆ ನೀಡಿದರು.

ಹನಿಟ್ರ್ಯಾಪ್ ಆರೋಪ ಪ್ರತ್ಯಾರೋಪದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ತನಿಖೆಗೆ ಶೀಘ್ರವೇ ಆದೇಶಿಸಲಾಗುವುದು. ರಾಜಣ್ಣ ಅವರು ದೂರು ನೀಡಿದ ಕೂಡಲೇ ತನಿಖೆ ಮಾಡಿಸಲಾಗುವುದು ಎಂದರು.

ಹನಿಟ್ರ್ಯಾಪ್‌ಗೆ ಫುಲ್‌ ಸ್ಟಾಪ್ ಹಾಕಬೇಕು. ಹನಿಟ್ರ್ಯಾಪ್ ಎನ್ನುವುದು ಸದನದ ಎಲ್ಲ ಸದಸ್ಯರ ಮರ್ಯಾದೆ ಪ್ರಶ್ನೆ. ಗೌರವ ಗಳಿಸಿಕೊಂಡಿರುವ ನಾಯಕರ ಘನತೆಯನ್ನು ಉಳಿಸಿಕೊಳ್ಳುವುದು ಅಗತ್ಯವಾಗಿದೆ. ಒಬ್ರು ಇಬ್ಬರು ಸಚಿವರಿಗೆ ಹನಿಟ್ರಾಪ್ ಅಂತಲ್ಲಾ ಇದು ಎಲ್ಲರ ಮರ್ಯಾದೆಯ ಪ್ರಶ್ನೆ. ಸದನದ ಮರ್ಯಾದೆಯೂ ಹೌದು. ಹೀಗಾಗಿ ನಾನು ಈ ಕೂಡಲೇ ಉನ್ನತ ಮಟ್ಟದ ತನಿಖೆಗೆ ಆದೇಶಿಸುವೆ ಎಂದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button