Latest

ಮಂಗಳಸೂತ್ರ ಕಳಚಿಡುವುದು ಪತಿಯ ಪಾಲಿಗೆ ಗರಿಷ್ಠ ಮಟ್ಟದ ಮಾನಸಿಕ ಕ್ರೌರ್ಯ

ಪ್ರಗತಿವಾಹಿನಿ ಸುದ್ದಿ, ಚೆನ್ನೈ: ಮಹಿಳೆಯೊಬ್ಬಳು ತನ್ನ ಮಂಗಳಸೂತ್ರ ( ತಾಳಿ)ವನ್ನು ಕಳಚಿಡುವುದು ಪತಿಯ ಪಾಲಿಗೆ ಗರಿಷ್ಠ ಮಟ್ಟದ ಮಾನಸಿಕ ಕ್ರೌರ್ಯಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಡೈವೋರ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆದ ವೇಳೆ ನ್ಯಾ.ಮೂ. ವಿ.ಎಂ. ವೇಲುಮಣಿ ಹಾಗೂ ನ್ಯಾ.ಮೂ.ಎಸ್.ಎಸ್. ಸುಂದರ ಅವರನ್ನೊಳಗೊಂಡ  ದ್ವಿಸದಸ್ಯ ಪೀಠ ಈ ರೀತಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದೆ.

ಪತಿಯೊಂದಿಗಿನ ವೈವಾಹಿಕ ಬಾಂಧವ್ಯ ಮುಂದುವರಿಯುವುದರ ಸಂಕೇತ ಮಂಗಳಸೂತ್ರ. ಪತಿಯ ಸಾವಿನ ನಂತರವೇ ಅದನ್ನು ತೆಗೆಯಲಾಗುತ್ತದೆ. ಅಂಥ ಮಂಗಳಸೂತ್ರವನ್ನು ಕಳಚಿಡುವುದು ಪರಿಗೆ ನೀಡುವ ಗರಿಷ್ಠ ಮಟ್ಟದ ಮಾನಸಿಕ  ಕ್ರೌರ್ಯ ಎಂದು ಕೋರ್ಟ್ ಹೇಳಿದೆ.

ತಮಗೆ ವಿವಾಹ  ವಿಚ್ಛೇದನ ನೀಡಲು ಅಧೀನ ನ್ಯಾಯಾಲಯ ನಿರಾಕರಿಸಿದ್ದನ್ನು ಪ್ರಶ್ನಿಸಿ ಶಿವಕುಮಾರ್ ಎಂಬುವವರು ಕೋರ್ಟ್ ಮೆಟ್ಟಿಲೇರಿದ್ದರು.

ರೋಹಿತ್ ಶರ್ಮಾ ಕಳಚಿದ ಕೈ ಸರಿಪಡಿಸಿಕೊಂಡಿದ್ದು ಹೇಗೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button