
ಪ್ರಗತಿವಾಹಿನಿ ಸುದ್ದಿ: ರೈಲು ಹಳಿಗಳ ಮೇಲೆಯೇ ಗುಡ್ಡ ಕುಸಿತವಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರದ ಯಡೆಕುಮೇರಿ ಬಳಿ ನಡೆದಿದೆ.
ರೈಲ್ವೆ ಹಳಿಗಳ ಮೇಲೆಯೇ ಗುಡ್ಡ ಕುಸಿತವಾಗಿದ್ದು, ಈ ಭಾಗದ ರೈಲು ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಬೆಂಗಳೂರು-ಕಣ್ಣೂರು ಘಾಟ್ ರೈಲು, ಬೆಂಗಳೂರು-ಮುರುಡೇಶ್ವರ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಅರೆಬೆಟ್ಟ, ಯಡೆಕುಮೇರಿ ಮಧ್ಯೆ ರೈಲ್ವೆ ಹಳಿಗಳ ಮೇಲೆ ಗುಡ್ಡ ಕುಸಿದಿದೆ. ಹಳಿ ಮೇಲೆ ಬಿದ್ದಿರುವ ಗುಡ್ದ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಕೆಲ ರೈಲುಗಳು ಮಾರ್ಗಮಧ್ಯೆಯೇ ಸ್ಥಗಿತಗೊಂಡಿದ್ದು, ಪ್ರಯಾಣಿಕರಿಗೆ ನೀರು, ಟೀ, ಕಾಫಿ ವ್ಯವಸ್ಥೆ ಮಾಡಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ


