Latest

*ವರನ ತಂದೆ ಜೊತೆ ಪರಾರಿಯಾದ ವಧು* 

ಪ್ರಗತಿವಾಹಿನಿ ಸುದ್ದಿ: ಬಹಳಷ್ಟು ಪ್ರಕರಣದಲ್ಲಿ ಮಧುವಿಗೆ ನಿಶ್ಚಯಿಸಿದ ವರನ ಜೊತೆ ವಧುವಿನ ತಾಯಿ ಪರಾರಿಯಾಗಿದ್ದನ್ನು ನೋಡಿದ್ದೇವೆ.‌ ಆದರೆ ಈ ಪ್ರಕರಣದಲ್ಲಿ ಎಲ್ಲಾ ಉಲ್ಟಾ ಆಗಿದೆ.

ಈ ಪ್ರಕರಣದಲ್ಲಿ ಪುತ್ರನಿಗೆ ನಿಶ್ಚಯಿಸಿದ್ದ ವಧು ಜತೆ 6 ಮಕ್ಕಳ ತಂದೆ ಪರಾರಿಯಾಗಿರುವ ಘಟನೆ ನಡೆದಿದೆ.

ಆರು ಮಕ್ಕಳ ತಂದೆಯೊಬ್ಬ ತನ್ನ ಪುತ್ರನಿಗೆ ನಿಶ್ಚಯಿಸಿದ್ದ ವಧುವಿನೊಂದಿಗೆ ಪರಾರಿಯಾಗಿರುವ ಪ್ರಕರಣ ಉತ್ತರಪ್ರದೇಶದ ರಾಂಪುರದಲ್ಲಿ ಬೆಳಕಿಗೆ ಬಂದಿದೆ.

ಶಕೀಲ್ ಎಂಬಾತನಿಗೆ 6 ಮಕ್ಕಳಿದ್ದು, ಆತ ತನ್ನ 17 ವರ್ಷದ ಪುತ್ರನಿಗೆ 22 ವರ್ಷದ ಯುವತಿ ಜತೆ ನಿಶ್ಚಿತಾರ್ಥ ಮಾಡಿಸಿದ್ದ. ಆ ಬಳಿಕ ಶಕೀಲ್ ಆ ಯುವತಿಯೊಂದಿಗೆ ನಿರಂತರವಾಗಿ ಫೋನ್ ಸಂಪರ್ಕದಲ್ಲಿದ್ದ ಮತ್ತು ದಿನದ ಬಹುತೇಕ ಸಮಯ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದ. ಯುವತಿ ಜತೆ ಆತನಿಗೆ ಅನೈತಿಕ ಸಂಬಂಧವಿರುವ ಕುರಿತು ನಮಗೆ ಅನುಮಾನವಿತ್ತು. ಆ ಕುರಿತು ನಾವು ಸಾಕ್ಷ್ಯವನ್ನೂ ಕಲೆ ಹಾಕಿದ್ದೆವು ಎಂದು ಶಕೀಲ್ ಪತ್ನಿ ಶಬಾನಾ ತಿಳಿಸಿದ್ದಾರೆ.

ಶಕೀಲ್ ಪುತ್ರನಿಗೆ ಈ ವಿಷಯ ತಿಳಿದಿತ್ತು, ಆ ಬಳಿಕ ಆತ ಮದುವೆಗೆ ನಿರಾಕರಿಸಿದ್ದ. ಈ ಹಿನ್ನೆಲೆಯಲ್ಲಿ ಶಕೀಲ್ 2 ಲಕ್ಷ ರೂ. ಹಣ ಮತ್ತು 17 ಗ್ರಾಂ ಚಿನ್ನದೊಂದಿಗೆ ಯುವತಿಯನ್ನು ಕರೆದುಕೊಂಡು ಪರಾರಿಯಾಗಿ ಮದುವೆಯಾಗಿದ್ದಾನೆ ಎಂದು ವರನ ತಾಯಿ ಶಬಾನಾ ಆರೋಪಿಸಿದ್ದಾರೆ ಎಂದು ಮಾಧ್ಯಮಗಳು ಅವರದಿ ಮಾಡಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button