Kannada NewsLatestPoliticsWorld

*ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ: ಟೇಬಲ್ ಕೆಳಗೆ ಕುಳಿತು ರಕ್ಷಿಸಿಕೊಂಡ ಟ್ರಂಪ್*

ಪ್ರಗತಿವಾಹಿನಿ ಸುದ್ದಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದು, ಡೊನಾಲ್ಡ್ ಟ್ರಂಪ್ ಟೇಬಲ್ ಕೆಳಗೆ ಅವಿತುಕುಳಿತು ದಾಳಿಯಿಂದ ರಕ್ಷಿಸಿಕೊಂಡ ಘಟನೆ ನಡೆದಿದೆ.

ಅಮೆರಿಕದ ರಾಜಧಾನಿ ವಾಷಿಂಗ್ಟನ್‌ನ ಹಿಲ್ಟನ್ ಹೋಟೆಲ್ ನಲ್ಲಿ ನಡೆದ ಶ್ವೇತಭವನದ ವಾರ್ಷಿಕ ಭೋಜನಕೂಟ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಡೊನಾಲ್ಡ್ ಟ್ರಂಪ್ ಅವರನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ತಕ್ಷಣ ಸೀಕ್ರೆಟ್ ಸೆಕ್ಯುರಿಟಿ ಸಿಬ್ಬಂದಿಗಳು ಡೊನಾಲ್ಡ್ ಅವರನ್ನು ರಕ್ಷಿಸಿದ್ದಾರೆ. ಫೈರಿಂಗ್ ನಡೆಯುತ್ತಿದ್ದಂತೆ ಟ್ರಂಪ್ ಟೇಬಲ್ ಕೆಳಕೆ ಕುಳಿತುಕೊಂಡು ರಕ್ಷಿಸಿಕೊಂಡಿದ್ದಾರೆ. ತಕ್ಷಣ ಅವರನ್ನು ಭದ್ರತಾ ಸಿಬ್ಬಂದಿಗಳು ಸುತ್ತುವರೆದು ಅವರನ್ನು ಬೇರೆಡೆ ಸ್ಥಳಾಂತರಿಸಿದರು.

ಗುಂಡಿನ ದಾಳಿ ನಡೆಸಿದ ಆರೋಪಿಯನ್ನು ಭದ್ರತಾ ಸಿಬ್ಬಂದಿಗಳು ಬಂಧಿಸಿದ್ದಾರೆ. ಈತ ಕ್ಯಾಲಿಫೋರ್ನಿಯಾ ಮೂಲದವನು ಎಂದು ತಿಳಿದುಬಂದಿದೆ. ಕ್ಯಾಲಿಫೊರ್ನಿಯಾದ ಟೊರೆನ್ಸ್ ನಿವಾಸಿ ಥಾಮಸ್ ಅಲೆನ್ (31) ಬಂಧಿತ ದಾಳಿಕೊರ. ಆತನ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಗುಂಡಿನ ದಾಳಿಯಲ್ಲಿ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಎಲ್ಲರೂ ಸುರಕ್ಷಿತರಾಗಿದ್ದಾರೆ. ಘಟನ ಸ್ಥಳದಲ್ಲಿ ಭಾರಿ ಭದ್ರತೆ ಕೈಗೊಳ್ಳಲಗಿದ್ದು, ತನಿಖೆ ಮುಂದುವರೆದಿದೆ.


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button