Belagavi NewsBelgaum NewsKannada NewsKarnataka News

*ಬೆಳಗಾವಿಯಲ್ಲಿ ಭೀಕರ ಅಪಘಾತ: ಇಬ್ಬರು ದುರ್ಮರಣ* 

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದ ಬಳಿ ಬೈಕ್ ಮತ್ತು ಟಾಟಾ ಗೂಡ್ಸ್ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.‌

Home add -Advt

ಆನೆಗುಂದಿ ಗ್ರಾಮದಿಂದ ಲೋಕಾಪುರಕ್ಕೆ ಹೋಗುವ ಸಂದರ್ಭದಲ್ಲಿ ಬಟಕುರ್ಕಿ ಬಳಿ ಟಾಟಾ ಗೂಡ್ಸ್ ವಾಹನ ಬೈಕಿಗೆ ಡಿಕ್ಕಿಯಾಗಿ ದುರ್ಘಟನೆ ಸಂಭವಿಸಿದೆ.‌ ಈ ಅಪಘಾತದಲ್ಲಿ ಶಿವಾನಂದ ಖಾನಾಪುರ ಮತ್ತು ಮಲ್ಲಪ್ಪ ಕೌಜಲಗಿ ಎಂಬುವರು ಮೃತಪಟ್ಟಿದ್ದಾರೆ.‌

ಟಾಟಾ ಗೂಡ್ಸ್ ವಾಹನದಲ್ಲಿ ಒಟ್ಟು 4 ಜನರಿದ್ದರು ಎನ್ನಲಾಗಿದೆ.‌ ಗೂಡ್ಸ್ ವಾನದಲ್ಲಿ ಇದ್ದವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.‌ ವಿಷಯ ತಿಳಿಯುತ್ತಿದ್ದಂತೆ ರಾಮದುರ್ಗ ಡಿವೈಎಸ್ಪಿ ಪಾಂಡುರಂಗ ಮತ್ತು ಪಿಎಸ್ಐ ಸುನೀಲ್ ಕುಮಾರ್ ನಾಯಕ ಹಾಗೂ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.‌ 

Related Articles

Back to top button