ಪ್ರಗತಿವಾಹಿನಿ ಸುದ್ದಿ: ಆಸ್ಪತ್ರೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕನಿಷ್ಠ ಹತ್ತು ನವಜಾತ ಶಿಶುಗಳು ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದ ಝಾನ್ಸಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಸರ್ಕಾರಿ ರಾಣಿ ಲಕ್ಷ್ಮಿಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಶಾರ್ಟ್ ಸರ್ಕೀಟ್ ಆಗಿದ್ದೆ ಬೆಂಕಿ ಅನಾಹುತಕ್ಕೆ ಕಾರಣವೆನ್ನಲಾಗಿದೆ. 16 ಮಂದಿಯ ಸ್ಥಿತಿ ಗಂಭೀರವಾಗಿದ್ದು ಅವರು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದ್ದು ಪರಿಸ್ಥಿತಿ ಹದಗೆಟ್ಟ ಪರಿಣಾಮ ಹಲವರು ಕಾಲ್ತುಳಿತದಿಂದಲೂ ಘಾಸಿಗೊಂಡಿದ್ದಾರೆ. ಆರು ಅಗ್ನಿ ಶಾಮಕ ದಳದ ವಾಹನಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ನಿರತವಾಗಿದೆ. ರಾತ್ರಿ 12.30 ರ ಹೊತ್ತಿಗೆ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ.
ಸೇಫ್ಟಿ ಅಲಾರ್ಮ್ ಕಾರ್ಯ ನಿರ್ವಹಿಸದಿರುವುದು, ಜನರನ್ನು ಸ್ಥಳಾಂತರಿಸುವಲ್ಲಿ ತೋರಿಸಿದ ವಿಳಂಬ ಅವಘಡದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಅವಿನಾಶ್ ಕುಮಾರ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ