Latest

ಈ ಹೋಟೆಲ್ ನಲ್ಲಿ ದೋಸೆ, ಇಡ್ಲಿ ವಡೆ ದರ ಕೇಳಿದರೆ ಹೌಹಾರಿ ಹೋಗ್ತೀರಾ !

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಬಿಸಿಬಿಸಿ ದೋಸೆ, ವಡಾ, ಸಾಂಬಾರ್ ಇವೆಲ್ಲ ನೆನಪಿಸಿಕೊಂಡರೆ ಯಾರ ಬಾಯಿಗೆ ತಾನೇ ನೀರು ಬಾರದು? ಆದರೆ ಇಲ್ಲೊಂದು ಹೋಟೆಲ್ ಮೆನುವಿನಲ್ಲಿ ಇದೇ ದೋಸೆ, ಇಡ್ಲಿ, ಸಾಂಬಾರ್ ದರ ಕೇಳಿದರೆ ಮೈಯ್ಯಲ್ಲಿರುವ ನೀರಿನ ಅಂಶವೆಲ್ಲ ಆರಿ ಹೋಗುವುದು ಗ್ಯಾರಂಟಿ.

ಕ್ರೆಪ್ ಕಂ ಎಂಬ ಯುಎಸ್ ನ ಹೋಟೆಲ್ ಮೆನುವಿನಲ್ಲಿ ಇವುಗಳನ್ನು ದಕ್ಷಿಣ ಭಾರತದ ಹಳೆಯ ಉಪಾಹಾರ ಖಾದ್ಯಗಳು ಎಂದು ನಮೂದಿಸಲಾಗಿದೆ. ಇವುಗಳ ಹೆಸರೂ ಅಲ್ಲಿ ಬದಲಾಗಿದೆ. dunked doughnut delight (ಮೆದು ವಡಾ), dunked rice cake delight (ಸಾಂಬಾರ್ ಇಡ್ಲಿ), naked crepe (ಸಾದಾ ದೋಸೆ),  smashed potato crepe (ಮಸಾಲೆ ದೋಸೆ).

ಇದನ್ನು ಜಾಲತಾಣಗಳಲ್ಲಿ ಭಾರತೀಯರು ‘ಹಾಸ್ಯಾಸ್ಪದ ಮೆನು’ ಎಂದು ಕಟಕಿದ್ದರೆ ಇಲ್ಲಿನ ದರ ‘ಅಪರಾಧ’ ಎಂದು ಪರಿಗಣಿಸುವಷ್ಟು ದುಬಾರಿಯಾಗಿದೆ ಎಂದು ಇನ್ನಷ್ಟು ಜನ ಅಭಿಪ್ರಾಯಪಟ್ಟಿದ್ದಾರೆ. ಇಷ್ಟಕ್ಕೂ ಇವುಗಳ ದರ ಏನು ಗೊತ್ತಾ?

ಸ್ಮಾಶ್ಡ್ ಪೊಟಾಟೊ ಕ್ರೇಪ್- $18.69 ( 1,491ರೂ.), ನೇಕೆಡ್ ಕ್ರೇಪ್- $17.59 ( 1,404 ರೂ.), ಡಂಕ್ಡ್ ಡೋನಟ್ ಡಿಲೈಟ್- $16.49 (1,316 ರೂ.) ಮತ್ತು ಡಂಕ್ಡ್ ರೈಸ್ ಕೇಕ್ ಡಿಲೈಟ್- (R15.39) (1,228ರೂ.).

ಇದರ ಹಿಂದೆ ಯಾರದ್ದೋ ಕೈವಾಡ, ಷಡ್ಯಂತ್ರವಿದೆ; ಕಾಂಗ್ರೆಸ್ ನಾಯಕಿ ನವ್ಯಶ್ರೀ ಆರೋಪ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button