Latest

ಬೆಳಗಾವಿ ಭಾಗದ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಡಾಲಿ ಧನಂಜಯ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಲನ್ ಪಾತ್ರದಲ್ಲಿ ಮಾತ್ರವಲ್ಲ ನಾಯಕ ನಟನಾಗಿಯೂ ಸೈ ಎನಿಸಿಕೊಂಡಿರುವ ಸ್ಯಾಂಡಲ್ ವುಡ್ ನಟ ಡಾಲಿ ಧನಂಜಯ್ ಇದೀಗ ಮತ್ತೊಂದು ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಬಡವ ರ್ಯಾಸ್ಕಲ್ ಚಿತ್ರದ ಬಳಿಕ ಇದೀಗ ಹೊಯ್ಸಳ ಚಿತ್ರದ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿರುವ ಧನಂಜಯ್, ಈ ಚಿತ್ರದಲ್ಲಿ ಬೆಳಗಾವಿ ಭಾಗದ ದಕ್ಷ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಮಿಂಚಲಿದ್ದಾರಂತೆ.

ಬೆಳಗಾವಿ ಭಾಗದಲ್ಲೇ ಚಿತ್ರ ಕಥೆ ನಡೆಯುವುದರಿಂದ ಕುಂದಾನಗರಿಯ ಸುತ್ತಮುತ್ತ ಸಿನಿಮಾ ಶೂಟಿಂಗ್ ಕೂಡ ಆರಂಭವಾಗಿದೆ. ಧನಂಜಯ್ ಅಭಿನಯದ 25ನೇ ಚಿತ್ರ ಇದಾಗಿದ್ದು, ಹೊಯ್ಸಳ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಸ್ಯಾಂಡಲ್ ವುಡ್ ನಟ ಚೇತನ್ ಗೆ ಮತ್ತೊಂದು ಸಂಕಷ್ಟ

Related Articles

Back to top button