Latest

ಅನೈತಿಕ ಸಂಬಂಧ; ಮಹಿಳೆ ಕೊಲೆ ರಹಸ್ಯ ಮುಚ್ಚಿಡಲು 9 ಜನರನ್ನು ಕೊಂದು ಬಾವಿಗೆ ತಳ್ಳಿದ ಪಾತಕಿ

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಪ್ರೇಯಸಿಯ ಕೊಲೆ ರಹಸ್ಯವನ್ನು ಮುಚ್ಚಿ ಹಾಕಲು ಬರೋಬ್ಬರಿ 9 ಜನರನ್ನು ಹತ್ಯೆಗೈದು ಬಾವಿಗೆ ಎಸೆದ ಘಟನೆಯ ಸತ್ಯಾಂಶ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ತೆಲಂಗಾಣದ ವಾರಂಗಲ್ ಜಿಲ್ಲೆ ಗೊರ್ರೆಕುಂಟಾ ಗ್ರಾಮದಲ್ಲಿ ಒಂದೇ ಬಾವಿಯಲ್ಲಿ 9 ಮೃತದೇಹಗಳನ್ನು ಪೊಲೀಸರು ಹೊರತೆಗೆದಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರಿಗೆ ಶಾಕ್ ಆಗುವ ಘಟನೆ ಬೆಳಕಿಗೆ ಬಂದಿದೆ.

ಈ ಪ್ರಕರಣ ಭೇದಿಸಿದ ಪೊಲೀಸರು ಆರೋಪಿ ಸಂಜಯ್‍ನನ್ನು ಬಂಧಿಸಿದ್ದಾರೆ. ಈತನೇ ತನ್ನ ಪ್ರೇಯಸಿ ಕೊಲೆಯನ್ನು ಮರೆ ಮಾಚಲು ಆಕೆಯ ಕುಟುಂಬದವರನ್ನು ಸೇರಿ ಮೂವರು ಸಹೋದ್ಯೋಗಿಗಳನ್ನು ಅಮಾನುಷವಾಗಿ ಕೊಲೆ ಮಾಡಿದ್ದಾನೆ.

ಬಿಹಾರ್ ಮೂಲದ ಸಂಜಯ್ ಕುಮಾರ್ ಯಾದವ್ (30) ಗೊರ್ರೆಕುಂಟಾನಲ್ಲಿರುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಮೃತರಲ್ಲಿ ಒಬ್ಬನಾದ ಮಕ್ಸೂದ್ ಆಲಂ ಸಂಬಂಧಿ ರಫಿಕಾ ಸುಮಾರು ಐದು ವರ್ಷಗಳ ಹಿಂದೆ ತನ್ನ ಮೂವರು ಮಕ್ಕಳೊಂದಿಗೆ ಮಕ್ಸೂದ್ ಮನೆಗೆ ಬಂದಿದ್ದಳು. ನಂತರ ಅದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ಆರೋಪಿ ಯಾದವ್ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಬರ ಬರುತ್ತಾ ಸಂಜಯ್ ರಫಿಕಾ ಮಗಳ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ. ಇದರಿಂದ ಕೋಪಗೊಂಡ ರಫಿಕಾ ಆತನಿಗೆ ಎಚ್ಚರಿಕೆ ನೀಡಿದ್ದಾಳೆ. ಕೊನೆಗೆ ರಫಿಕಾಳನ್ನು ಕೊಲೆ ಮಾಡಲು ನಿರ್ಧರಿಸಿದ್ದ ಸಂಜಯ್, ರಫಿಕಾಳನ್ನು ಮದುವೆಯಾಗುವುದಾಗಿ ನಂಬಿಸಿ, ಮದುವೆ ಬಗ್ಗೆ ಸಂಬಂಧಿಕರ ಜೊತೆ ಮಾತನಾಡುವುದಾಗಿ ಹೇಳಿ ಮಾರ್ಚ್ 7 ರಂದು ರಫಿಕಾಳನ್ನು ಪಶ್ಚಿಮ ಬಂಗಾಳಕ್ಕೆ ಗರಿಬ್ ರಾಥ್ ರೈಲಿನಲ್ಲಿ ಕರೆತಂದಿದ್ದ.

ನಿದ್ದೆ ಮಾತ್ರೆಗಳನ್ನು ಮಜ್ಜಿಗೆಯಲ್ಲಿ ಮಿಕ್ಸ್ ಮಾಡಿ ರಫಿಕಾಳಿಗೆ ನೀಡಿದ್ದಾನೆ. ಅದನ್ನು ಕುಡಿದ ರಫಿಕಾ ಪ್ರಜ್ಞೆ ತಪ್ಪಿದ್ದಾಳೆ. ತಕ್ಷಣ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಮೂಲಕ ಹಾದುಹೋಗುತ್ತಿದ್ದಾಗ ಆಕೆಯ ಶವವನ್ನು ಹೊರಗೆ ಎಸೆದಿದ್ದಾನೆ. ಮಹಿಳೆ ಶವ ಪತ್ತೆಯಾದ ನಂತರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ ಮಹಿಳೆ ಗುರುತನ್ನು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ ಎಂದು ವಾರಂಗಲ್ ಪೊಲೀಸ್ ಆಯುಕ್ತ ಡಾ.ವಿ.ರವಿಂದ್ರ ತಿಳಿಸಿದ್ದಾರೆ.

ವಾಪಸ್ ಬಂದ ಸಂಜಯ್, ರಫಿಕಾಳ ಮೂವರು ಮಕ್ಕಳಿಗೆ ನಿಮ್ಮ ತಾಯಿ ಪಶ್ಚಿಮ ಬಂಗಾಳದಲ್ಲಿಯೇ ಉಳಿದುಕೊಂಡಿದ್ದಾಳೆ ಎಂದಿದ್ದಾನೆ. ಇದರಿಂದ ಅನುಮಾನಗೊಂಡ ಮಕ್ಸೂದ್ ಪತ್ನಿ ನಿಶಾ ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಸಿದ್ದಾಳೆ. ಇದರಿಂದ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ ಮೇ 20 ರಂದು ಮಕ್ಸೂದ್ ಮಗನ ಹುಟ್ಟುಹಬ್ಬದಂದು ಸಂಜಯ್ 50-60 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಬಂದು, ಊಟದಲ್ಲಿ ಮಿಕ್ಸ್ ಮಾಡಿದ್ದಾನೆ ಊಟವನ್ನು ಮಾಡಿದ್ದ ಮಕ್ಸೂದ್ ಕುಟುಂಬ ಮತ್ತೆ ಬಿಹಾರದ ಕಾರ್ಮಿಕರು ನಿದ್ದೆ ಮಾಡಿದ್ದಾರೆ. ಅಂದು ಆರೋಪಿ ಸಂಜಯ್ ಎಲ್ಲರನ್ನೂ ಸಾಯಿಸಿ ಒಬ್ಬೊಬ್ಬರನ್ನಾಗಿ ಗೋಣಿಚೀಲದಲ್ಲಿ ತುಂಬಿ ಬಾವಿ ಬಳಿ ಎಳೆದುಕೊಂಡು ಹೋಗಿ ಬಾವಿಗೆ ಎಸೆದಿದ್ದಾನೆ. ಬಳಿಕ ಅಲ್ಲಿಂದ ಪರರೈಯಾಗಿದ್ದ.

ಮಕ್ಸೂದ್ ಫೋನ್ ಕಾಲ್ ಆಧಾರದ ಮೇಲೆ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿ ಸಂಜಯ್ ಯಾದವ್ ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button