Belagavi NewsBelgaum NewsElection NewsKannada NewsKarnataka NewsPolitics

ಗ್ರಾಮೀಣ ಭಾರತದ ಕನಸುಗಳನ್ನು ನನಸು ಮಾಡಲು ನಾನು ಶ್ರಮಿಸುತ್ತಿದ್ದೇನೆ – ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಕಳೆದ 32 ವರ್ಷಗಳಿಂದ ನಾನು ಬೆಳೆಸಿಕೊಂಡು ಬಂದಿರುವ ಸಮಾಜ ಸೇವಾ ಮನೋಭಾವ ಒಂದೇ, ಗ್ರಾಮೀಣ ಭಾರತದ ಕನಸುಗಳನ್ನು ನನಸು ಮಾಡಲು ನಾನು ಶ್ರಮಿಸುತ್ತಿದ್ದೇನೆ. ನನ್ನ ಪ್ರತಿಜ್ಞೆ ನಿರಂತರವಾಗಿ ಮುಂದುವರೆಯುವುದು ಎಂದು ಸಂಸದ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಣ್ಣಾ ಸಾಹೇಬ ಜೊಲ್ಲೆ ಹೇಳಿದ್ದಾರೆ.

ಪ್ರಚಾರ ಕರಪತ್ರ ಬಿಡುಗಡೆಗೊಳಿಸಿ, ಕ್ಷೇತ್ರದ ವಿವಿಧೆಡೆ ಮತಯಾಚಿಸಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ನವ ಭಾರತ ನಿರ್ಮಾಣದತ್ತ ವೇಗವಾಗಿ ಸಾಗುತ್ತಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಅನೇಕ ಗಮನಾರ್ಹ ಬೆಳವಣಿಗೆಗಳು ನಡೆದಿವೆ. ಅವುಗಳಲ್ಲಿ ಡಿಜಿಟಲ್ ಇಂಡಿಯಾ ಒಂದಾಗಿದೆ. ದಿಟ್ಟ ಮತ್ತು ತಕ್ಷಣ ತೆಗೆದುಕೊಳ್ಳುವ ನಿರ್ಧಾರಗಳು ನಮ್ಮ ರಾಷ್ಟ್ರವನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ಅನುವು ಮಾಡಿಕೊಟ್ಟಿವೆ. ನಮ್ಮ ಎಲ್ಲ ಸೇವೆಗಳು ಪಾರದರ್ಶಕವಾಗಿವೆ. ಹಾಗಾಗಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ನನಗೆ ಮತ ನೀಡಿ ಎಂದು ಅವರು ವಿನಂತಿಸಿದರು.

ನಮ್ಮ ಜನರು ಹೊಸ ಗ್ಯಾಜೆಟ್‌ಗಳು ಮತ್ತು ತಂತ್ರಜ್ಞಾನದೊಂದಿಗೆ ಪರಿಚಿತರಾಗುತ್ತಿದ್ದಾರೆ. ಆದರೆ ಕಳೆದ 32 ವರ್ಷಗಳಿಂದ ನಾನು ಬೆಳೆಸಿಕೊಂಡು ಬಂದಿರುವ ಸಮಾಜ ಸೇವಾ ಮನೋಭಾವ ಒಂದೇ, ಗ್ರಾಮೀಣ ಭಾರತದ ಕನಸುಗಳನ್ನು ನನಸು ಮಾಡಲು ನಾನು ಶ್ರಮಿಸುತ್ತಿದ್ದೇನೆ. ನನ್ನ ಪ್ರತಿಜ್ಞೆ ನಿರಂತರವಾಗಿ ಮುಂದುವರೆಯುವುದು. ಜನರ ಸೇವೆ ಮಾಡುತ್ತಾ ಸಹಕಾರಿ ಕ್ಷೇತ್ರದ ಮೂಲಕ ಹಣಕಾಸು, ಕೃಷಿ, ಶಿಕ್ಷಣ, ಕೈಗಾರಿಕೆ, ವ್ಯಾಪಾರ, ಮಹಿಳಾ ಹಾಗೂ ಯುವ ಸಬಲೀಕರಣ, ಕಲೆ, ಕ್ರೀಡೆ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಸಹಾಯ ಮಾಡಿದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ ಎಂದು ಅವರು ಹೇಳಿದರು.

ಗ್ರಾಮೀಣ ಪ್ರದೇಶಗಳಿಂದ ಪ್ರಾರಂಭಗೊಂಡ ನಮ್ಮ ಪ್ರಯಾಣ ಇಂದು ಅನೇಕ ರಾಜ್ಯಗಳವರೆಗೆ ಸಾಗಿದ್ದು, ಶೀಘ್ರದಲ್ಲೇ ಅದು ಭಾರತದಾದ್ಯಂತ ವಿಸ್ತರಿಸಲಿದೆ. ಜೊಲ್ಲೆ ಗ್ರೂಪ್ ದೇಶದ ಆರ್ಥಿಕತೆಯ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡುತ್ತಿದೆ. ಮುಖ್ಯವಾಗಿ ಯುವ ಪೀಳಿಗೆಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಹೋದರ, ಸಹೋದರಿಯರ ಆಶೀರ್ವಾದದಿಂದ ಕಳೆದ ಐದು ವರ್ಷಗಳಿಂದ ಸಂಸದನಾಗಿ ಈ ಭಾಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ರೂ. 8810 ಕೋಟಿಗೂ ಹೆಚ್ಚು ಅನುದಾನವನ್ನು ಕ್ಷೇತ್ರಕ್ಕೆ ತರಲಾಗಿದೆ. ಸರ್ಕಾರದ ಗರಿಷ್ಠ ಯೋಜನೆಗಳನ್ನು ಜನಸಾಮಾನ್ಯರಿಗೆ ಅರ್ಥವಾಗುವಂತೆ ಗ್ರಾಮದಿಂದ ಗ್ರಾಮಕ್ಕೆ ಜನಜಾಗೃತಿ ಮೂಡಿಸಲಾಗಿದೆ. ವಿಸ್ತಾರವಾದ ಕ್ಷೇತ್ರದ ಪ್ರತಿ ಹಳ್ಳಿಹಳ್ಳಿಗು ತಲುಪುವುದು ನನ್ನ ಪ್ರಯತ್ನವಾಗಿದೆ. ಮುಂಬರುವ ಅವಧಿಯಲ್ಲೂ ತಮ್ಮೆಲ್ಲರ ಆಶೀರ್ವಾದದಿಂದ ಮತ್ತಷ್ಟು ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡುತ್ತೇನೆ ಎಂದು ಅವರು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button