ಪ್ರಗತಿವಾಹಿನಿ ಸುದ್ದಿ: ಶೀಘ್ರವೇ ನಾನು ಅಧಿಕೃತವಾಗಿ ಮಗನ ಜೊತೆ ಕಾಂಗ್ರೆಸ್‌ಗೆ ಸೇರ್ಪಡೆ ಆಗುತ್ತೇನೆ ಎಂದು ಮಂಡ್ಯದ ಮಾಜಿ ಸಂಸದ, ಮಾಜಿ ಶಾಸಕ ಎಲ್. ಆರ್. ಶಿವರಾಮೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ಎಂದು ತಿಳಿದುಕೊಳ್ಳಿ. ಅಧಿಕೃತವಾಗಿ ಸೇರ್ಪಡೆಗೊಳ್ಳಬೇಕು. ಉಪ ಚುನಾವಣೆ ಸಮಯದಲ್ಲಿ ಚನ್ನಪಟ್ಟಣದಲ್ಲಿ ಸೇರಿಕೊಳ್ಳಿ ಎಂದರು. ನಾನೇ ಬೇಡ ಎಂದೆ. ಹಾಸನದಲ್ಲಿ ಸೇರಿಕೊಳ್ಳಿ ಎಂದರು ಆಗಲಿಲ್ಲ. ಬಳಿಕ ಬೆಳವಾವಿ ಅಧಿವೇಶನ, ಮಹಾಧಿವೇಶನ ಎಲ್ಲಾ ಇತ್ತು ಎಂದರು.
ಈಗ ಎಲ್ಲಾ ಮುಗಿದಿದೆ. ಆದರೆ ಈಗ ಸೇರಲು ಧನುರ್ಮಾಸ ಈಗೇಕೆ ಸೇರುತ್ತೀರಿ ಎನ್ನುತ್ತಿದ್ದಾರೆ. ಅದಕ್ಕೆ ಧನುರ್ಮಾಸ ಮುಗಿದ ಬಳಿಕ ಸೇರಿಕೊಳ್ಳುತ್ತೇನೆ. ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ. ನಾನು ನನ್ನ ರಾಜಕೀಯ ಪ್ರಾರಂಭ ಮಾಡಿದ್ದು ಕಾಂಗ್ರೆಸ್ ಪಕ್ಷದಿಂದ. ಬೇಕಾದಷ್ಟು ಕಾರಣಗಳು, ವಿಧಿ ಇಲ್ಲದೇ ಬೇರೆ ಬೇರೆ ಪಕ್ಷಗಳಿಗೆ ಹೋಗಬೇಕಾಯಿತು ಎಂದರು.
ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ಕೆಲವು ಅನಿವಾರ್ಯ ಸಂದರ್ಭವನ್ನು ಹೇಳಲು ಆಗುವುದಿಲ್ಲ. ಈಗ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ. ಜೀವಿತದ ಅವಧಿ ತನಕ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಏನು ಸೇವೆ ಮಾಡುವುದಕ್ಕೆ ಆಗುತ್ತದೆಯೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ