Latest

*ಭಾರತೀಯ ಸೇನಾ ವಿಮಾನಗಳ ನಡುವೆ ಭೀಕರ ಅಪಘಾತ; ಮೊರೆನಾ ಬಳಿ ಪತನಗೊಂಡ ಎರಡು ವಿಮಾನಗಳು*

ಪ್ರಗತಿವಾಹಿನಿ ಸುದ್ದಿ; ಮೊರೆನಾ: ಭಾರತೀಯ ವಾಯುಸೇನೆಯ ಎರಡು ವಿಮಾನಗಳು ಪರಸ್ಪರ ಡಿಕ್ಕಿಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ಮೊರೆನಾದಲ್ಲಿ ನಡೆದಿದೆ.

ವಾಯುಸೇನೆಯ ಸುಖೋಯ್-30 ಹಾಗೂ ಮಿರಾಜ್-2000 ಯುದ್ಧ ವಿಮಾನಗಳು ತಾಲಿಮು ನಡೆಸುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿವೆ. ಎರಡೂ ವಿಮಾನಗಳು ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯಿಂದ ತಾಲೀಮು ನಡೆಸುತ್ತಿದ್ದವು. ಹಾರಾಟ ನಡೆಸುತ್ತಿದ್ದ ವೇಳೆ ಆಗಸದಲ್ಲಿ ಡಿಕ್ಕಿಹೊಡೆದ ವಿಮಾನಗಳು ಮೊರೆನಾ ಬಳಿ ಪತನಗೊಂಡಿವೆ.

Home add -Advt

ಸುಖೋಯ್ ವಿಮಾನದಲ್ಲಿ ಇಬ್ಬರು ಹಾಗೂ ಮಿರಾಜ್ ನಲ್ಲಿ ಓರ್ವ ಪೈಲಟ್ ಇದ್ದರೆಂಬ ಮಾಹಿತಿ ಇದ್ದು, ಪ್ರಸ್ತುತ ಇಬ್ಬರು ಪೈಲಟ್ ಗಳನ್ನು ರಕ್ಷಿಸಲಾಗಿದೆ ಎಂದು ತಿಳಿದುಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದೆ.

*ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಮಿಂಚಿನ ಸಂಚಲನ ಎಂದ ಸಿಎಂ*

https://pragati.taskdun.com/amith-shahbelagavikitturu-karnatakacm-basavaraj-bommai/

Related Articles

Back to top button